ನೂತನ ತಾಲೂಕು ಘೋಷಣೆಗೆ ಮಾನವ ಸರಪಳಿ

Human chain for declaration of new taluk
ಮಹಾಲಿಂಗಪುರ ತಾಲೂಕು ರಚನೆಗೆ ಆಗ್ರಹಿಸಿ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು. ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಗಂಗಾಧರ ಮೇಟಿ, ಅರ್ಜುನ ಹಲಗಿಗೌಡರ ಮತ್ತಿತರರಿದ್ದಾರೆ.
Published on

ಮಹಾಲಿಂಗಪುರ: ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಿಸುವಂತೆ ಹೋರಾಟ ನಡೆಸುತ್ತಿದ್ದು ಮೂರು ವರ್ಷ ಕಳೆದರೂ ಸರ್ಕಾರ ಇನ್ನು ಭರವಸೆ ನೀಡುತ್ತಲೇ ಬಂದಿದೆ. ಆದ್ದರಿಂದ ಸರ್ಕಾರದ ಗಮನ ಸೆಳೆಯಲು ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಸೋಮವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಲಾಯಿತು.

ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ, ಸುತ್ತಮುತ್ತಲಿನಲ್ಲಿರುವ ಗ್ರಾಮಗಳ ಜನ ಮಹಾಲಿಂಗಪುರ ತಾಲೂಕು ಕೇಂದ್ರದಲ್ಲಿ ಆಡಳಿತಾತ್ಮಕವಾಗಿ ಜನತೆಗೆ ಅನುಕೂಲವಾಗುತ್ತದೆ. ಇದು ಇವತ್ತಿನದಲ್ಲ, 50 ವರ್ಷಗಳ ಕೂಗು. ಇದಕ್ಕೆ ಹೆಚ್ಚಿನ ತೀವೃತೆ ದೊರಕಿರುವುದು ಎರಡು ದಶಕಗಳ ಈಚೆಗೆ ಎಂದರು.

ತಾಲೂಕು ಹೋರಾಟದಲ್ಲಿ ಮುಂಚೂಣಿಯಲ್ಲಿರುವ ರೈತ ಸಂಘ ಹಸಿರು ಸೇನೆಯ ಸಂಚಾಲಕ ಮತ್ತು ತಾಲೂಕು ಹೋರಾಟದ ಸದಸ್ಯ ಗಂಗಾಧರ ಮೇಟಿ, ಆಮ್ ಆದ್ಮಿ ಪಕ್ಷದ ಮುಖಂಡ ಅರ್ಜುನ್ ಹಲಗಿಗೌಡರ ಮಾತನಾಡಿ, ಮಹಾಲಿಂಗಪುರ ಎಲ್ಲ ಆಯಾಮಗಳಲ್ಲಿ ಭೌಗೋಳಿಕ ಹಿನ್ನೆಲೆ ಹೊಂದಿರುವ ದೊಡ್ಡ ಪಟ್ಟಣವಾಗಿದ್ದು ಕೂಡಲೇ ತಾಲೂಕು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಜಮಖಂಡಿ ತಾಲೂಕಿನಲ್ಲಿ ಅಧಿಕಾರ ವಿಕೇಂದ್ರೀಕರಣಗೊಂಡು ಮೂರು ನೂತನ ತಾಲೂಕುಗಳಾದಂತೆ ಇಲ್ಲಿಯೂ ಮಹಾಲಿಂಗಪುರ ತಾಲೂಕು ಕೇಂದ್ರ ಮಾಡುವ ಮೂಲಕ ಅಧಿಕಾರ ವಿಕೇಂದ್ರೀಕರಣ ಗೊಳಿಸಬೇಕು. ಸರ್ಕಾರ ತೆಗೆದುಕೊಳ್ಳುವ ಈ ಕ್ರಮದಿಂದ ಆಡಳಿತಾತ್ಮಕವಾಗಿ ಜನರಿಗೆ ಬಹಳ ಅನುಕೂಲವಾಗುತ್ತದೆ. ಎರಡು ದಶಕಗಳ ಹಿಂದೆ ಆಗಬೇಕಾಗಿರುವ ಕೆಲಸ ವಿಳಂಬವಾಗಿದೆ. ದಯವಿಟ್ಟು ಈ ಎಲ್ಲ ಆಯಾಮಗಳನ್ನು ಮುಂದಿಟ್ಟು ಸರ್ಕಾರ ಮಹಾಲಿಂಗಪುರ ನೂತನ ತಾಲೂಕು ಘೋಷಣೆ ಮಾಡಬೇಕು ಎಂದು ಅವರು ಸರ್ಕಾರವನ್ನು ಹೋರಾಟಗಾರರು ಒತ್ತಾಯಿಸಿದರು.

ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಅವರ ಮೂಲಕ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಮುಷ್ತಾಕ ಚಿಕ್ಕೋಡಿ ಮುಖಂಡರಾದ ಅರ್ಜುನ ಹಲಗಿಗೌಡರ, ವಿರೇಶ ಆಸಂಗಿ, ಮಾರುತಿ ಕರೋಶಿ, ಮನೋಹರ ಶಿರೋಳ, ಸಿದ್ದಪ್ಪ ಶಿರೋಳ, ಹನಮಂತ ಜಮಾದಾರ, ಪರಪ್ಪ ಬ್ಯಾಕೋಡ, ಎಸ್.ಎಂ. ಪಾಟೀಲ, ವಿಠ್ಠಲ ಢವಳೇಶ್ವರ, ಬಸಪ್ಪ ಚನ್ನಾಳ, ದುಂಡಪ್ಪ ಜಾಧವ,ರಫೀಕ್ ಮಲದಾರ, ರಾಜೇಸಾಬ ಐನಾಪೂರ, ಆನಂದ ಬಂಡಿ, ವಿಜಯ ಸಬಕಾಳೆ, ರಾಜು ತೇರದಾಳ, ನ್ಯಾಯವಾದಿಗಳಾದ ಎಂ.ಕೆ. ಸಂಗಣ್ಣವರ, ಅನಿಲ ಓಸ್ವಾಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net