ಹುಬ್ಬಳ್ಳಿಯಲ್ಲಿ ತಿರಂಗ ಯಾತ್ರೆ

Published on

ಹುಬ್ಬಳ್ಳಿ: ಇಲ್ಲಿಯ ಹಮ್ ಭಾರತಿ ಫೌಂಡೇಷನ್, ಚಿನ್ಮಯ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಮಹತ್ವ ಸಾರುವ ತಿರಂಗ ಯಾತ್ರೆಯನ್ನು ಆ. 12ರಂದು ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ.

ಚಿನ್ಮಯ ಕಾಲೇಜಿನಿಂದ ಹೊರಡುವ ಯಾತ್ರೆಯಲ್ಲಿ 400ಕ್ಕೂ ಹೆಚ್ಚು ವಿದ್ಯಾಥಿರ್ಗಳು ಪಾಲ್ಗೊಳ್ಳುವರು. 150 ಅಡಿ ಉದ್ದದ ಧ್ವಜರೊಂದಿಗೆ ಯಾತ್ರೆ ಸಾಗಲಿದೆ.

ವಿವಿಧ ವಾದ್ಯಮೇಳದೊಂದಿಗೆ ಭವಾನಿನಗರ, ಅಶೋಕನಗರ ಸೇತುವೆ, ದೇಶಪಾಂಡೆನಗರ, ಪ್ರವಾಸಿ ಮಂದಿರ, ಸಾಯಿ ಮಂದಿರ ಮೂಲಕ ಚನ್ನಮ್ಮ ವೃತ್ತ ತಲುಪಲಿದೆ ಎಂದು ಹಮ್ ಭಾರತಿ ಅಧ್ಯಕ್ಷ ಅನ್ವರ್ ಮುಲ್ಲಾ, ಕಾಲೇಜಿನ ಪ್ರಾಚಾರ್ಯ ವಿನಾಯಕ ಬಿ.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net