ಹುಲ್ಲೂರ ಗ್ರಾಪಂಗೆ ನೈನಾ ಅಧ್ಯಕ್ಷೆ, ನೀಲವ್ವ ಉಪಾಧ್ಯಕ್ಷೆ

Hullura Gram Panchayat, Naina Chavan, Nilavva Gowda, Muddebihala,
ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ಗ್ರಾಪಂ ಅಧ್ಯಕ್ಷೆ ನೈನಾ ಚವ್ಹಾಣ, ಉಪಾಧ್ಯಕ್ಷೆ ನೀಲವ್ವ ಗೌಡರ ಅವರನ್ನು ಸನ್ಮಾನಿಸಲಾಯಿತು. ಬಿ.ಕೆ.ಬಿರಾದಾರ, ಗುರು ತಾರನಾಳ, ಸಂತೋಷ ಚವ್ಹಾಣ, ಸುರೇಶ ಹಳೇಮನಿ, ಮಹ್ಮದರಫೀಕ ಶಿರೋಳ, ಸಿಕಂದರ್ ಜಾನ್ವೇಕರ್ ಇತರರಿದ್ದರು.
Published on

ಮುದ್ದೇಬಿಹಾಳ: ತಾಲೂಕಿನ ಹುಲ್ಲೂರ ಗ್ರಾಮ ಪಂಚಾಯಿತಿಯ 15 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಹುಲ್ಲೂರ ಎಲ್‌ಟಿ (ವೆಂಕಟೇಶನಗರ) ಪ್ರತಿನಿಧಿಸುವ ಅನುಸೂಚಿತ ಜಾತಿ ಕ್ಷೇತ್ರದ ಪ್ರತಿನಿಧಿ ನೈನಾ ಗುಂಡಪ್ಪ ಚವ್ಹಾಣ, ಉಪಾಧ್ಯಕ್ಷರಾಗಿ ಜಟ್ಟಗಿ ಪ್ರತಿನಿಧಿಸುವ ಸಾಮಾನ್ಯ ಕ್ಷೇತ್ರದ ಸದಸ್ಯೆ ನೀಲವ್ವ ಚಂದಪ್ಪ ಗೌಡರ ಶುಕ್ರವಾರ ಗ್ರಾಪಂನಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ನೈನಾ ಅವರಿಗೆ ಮಾಜಿ ಅಧ್ಯಕ್ಷ ಹಣಮಗೌಡ ಬಿರಾದಾರ, ನೀಲವ್ವ ಅವರಿಗೆ ಸದಸ್ಯ ಶಿವಾನಂದ ಲಮಾಣಿ ಸೂಚಕರಾಗಿದ್ದರು.

ಗ್ರಾಪಂನ 18 ಸದಸ್ಯರ ಪೈಕಿ ಕಲಾವತಿ ಮಾದರ, ಜಯಶ್ರೀ ಬಿರಾದಾರ, ಸಿದ್ದಮ್ಮ ಓಲೇಕಾರ, ಶಿರಿಯಪ್ಪ ದಾಸರ, ಹಣಮಗೌಡ ಬಿರಾದಾರ, ಭೀಮಪ್ಪ ಮಾದರ, ಚನ್ನವ್ವ ಮಾದರ, ಸುರೇಶ ಲಮಾಣಿ, ಅಶೋಕ ಬಿರಾದಾರ, ಭೀಮಬಾಯಿ ರಾಠೋಡ, ದಿಲೀಪಕುಮಾರ ನಾಯಕ, ಶಿವಾನಂದ ಲಮಾಣಿ ಹಾಜರಿದ್ದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಸ್.ಮಸಳಿ ಚುನಾವಣಾಧಿಕಾರಿಯಾಗಿದ್ದರು. ತಾಪಂ ಸಿಬ್ಬಂದಿ ಎಸ್.ಎಸ್.ಬಂಗಾರಗುಂಡ, ಪಿಡಿಒ ಅರವಿಂದ ಲೋಣಾವರಮಠ, ಕಾರ್ಯದರ್ಶಿ ಕನೀಸ್‌ಾತಿಮಾ ಇನಾಮದಾರ, ಸಿಬ್ಬಂದಿ ಸಹಕರಿಸಿದರು.

ಮುದ್ದೇಬಿಹಾಳ ಪೊಲೀಸ್ ಠಾಣೆಯ ಎಎಸ್‌ಐ ಅಮರೇಶ ಸಾಲಿ, ಹವಾಲ್ದಾರ್ ಶಾಂತಗೌಡ ಬನ್ನೆಟ್ಟಿ ಭದ್ರತೆ ಒದಗಿಸಿದ್ದರು.

ಆಯ್ಕೆಯ ನಂತರ ಮುದ್ದೇಬಿಹಾಳ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಸಂತೋಷ ಚವ್ಹಾಣ, ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ ಹಳೇಮನಿ ಮಾತನಾಡಿ, ಕಳೆದ 25 ವರ್ಷಗಳಿಂದ ಈ ಗ್ರಾಪಂ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದ್ದು ಅಧ್ಯಕ್ಷ, ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗುವ ಸಂಪ್ರದಾಯ ಈಗಲೂ ಮುಂದುವರಿದಿದೆ ಎಂದರು.

ಮುದ್ದೇಬಿಹಾಳ ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದರಫೀಕ ಶಿರೋಳ, ಮುಖಂಡರಾದ ಸಿಕಂದರ್ ಜಾನ್ವೆಕರ್, ರಾಜು ನಾಯಕ, ಸ್ಥಳೀಯ ಮುಖಂಡರು ಸೇರಿ ಹಲವರು ಪಾಲ್ಗೊಂಡು ಸಂಭ್ರಮಾಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net