ಹುಲ್ಲೂರ ಗ್ರಾಪಂಗೆ ಲೀಲಾ-ವೀಣಾ

Hulluru
Published on

ಲಕ್ಷ್ಮೇಶ್ವರ: ತಾಲೂಕಿನ ಹುಲ್ಲೂರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಲೀಲಾ ಶಿವಪ್ಪ ತಳವಾರ ಮತ್ತು ಉಪಾಧ್ಯಕ್ಷೆಯಾಗಿ ವೀಣಾ ಈರಪ್ಪ ಅಕ್ಕಿ ಅವಿರೋಧ ಆಯ್ಕೆಯಾದರು.

ಒಟ್ಟು 9 ಸದಸ್ಯರನ್ನೊಳಗೊಂಡ ಗ್ರಾಪಂ ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಬ ವರ್ಗಕ್ಕೆ ಮೀಸಲಾಗಿತ್ತು. ಗುರುವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೆ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿ ಬಿ.ಎಸ್ ಭಜಂತ್ರಿ ಅವರು ಅವಿರೋಧ ಆಯ್ಕೆ ಘೋಷಿಸಿದರು.

ಗ್ರಾಪಂ ಸದಸ್ಯರಾದ ಪರಮೇಶಗೌಡ ಪಾಟೀಲ, ಶಿವಣ್ಣ ಬಸಾಪುರ, ದೇವೇಂದ್ರಪ್ಪ ಲಮಾಣಿ, ಯಲ್ಲಪ್ಪ ನರಸೋಜಿ, ಮರಿಯವ್ವ ಹರಿಜನ, ಕವಿತಾ ಭಕ್ಷಿ, ಶಾರವ್ವ ಪಾಟೀಲ, ಪಿಡಿಒ ಶೇಖರಗೌಡ ವಡಕನಗೌಡ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net