ಹುಲ್ಲಿಕೇರಿ ಎಸ್‌ಪಿ ಗ್ರಾಮದೇವತೆ ಜಾತ್ರೆ ಸಂಪನ್ನ

Hullikeri SP Village Devata Fair is a success
Hullikeri SP Village Devata Fair is a success
Published on

ಗುಳೇದಗುಡ್ಡ: ಸಮೀಪದ ಹುಲ್ಲಿಕೇರಿ ಎಸ್‌ಪಿ ಗ್ರಾಮದ ದ್ಯಾಮಮ್ಮ ದೇವಿ ಹಾಗೂ ದುರ್ಗಮ್ಮದೇವಿ ಜಾತ್ರಾಮಹೋತ್ಸವದ ಅಂಗವಾಗಿ ಕಳಸ ಕುಂಭದಾರತಿ ಮೆರವಣೆಗೆ ಮಂಗಳವಾರ ಪಟ್ಟಣದ ಗಚ್ಚಿನಕಟ್ಟಿಯಿಂದ ಆರಂಭವಾಗಿ ಚೌಬಜಾರ, ಅರಳಿಕಟ್ಟಿ, ಭಾರತ ಮಾರ್ಕೆಟ್, ಹಾದಿಬಸವೇಶ್ವರ ದೇವಸ್ಥಾನದ ಮೂಲಕ ಹಾಯ್ದು ಹುಲ್ಲಿಕೇರಿ ಗ್ರಾಮಕ್ಕೆ ತೆರಳಿತು. ದೇವಿ ಜಾತ್ರೆ ಇಂದಿನಿಂದ ಆರಂಭಗೊಂಡು ಶನಿವಾರದವರೆಗೆ ನಡೆಯಲಿದೆ.

ಮೆರವಣಿಗೆಯಲ್ಲಿ ಕುಂಭಹೊತ್ತ ಸುಮಂಗಲೆಯರು, ಡೊಳ್ಳು, ಕರಡಿಮಜಲು, ಬಾಜಾಭಜಂತ್ರಿ ಮೇಳಗಳು ಭಾಗವಹಿಸಿದ್ದವು. ಮೆರವಣಿಗೆಯುದ್ದಕ್ಕೂ ಭಂಡಾರ ಎರಚಿ ಸಂಭ್ರಮಿಸಲಾಯಿತು.

ರಮೇಶ ಬೂದಿಹಾಳ, ಹನಮಂತ ವಗ್ಗನ್ನವರ, ಹನಮಂತ ಮುಗದೊಳ್ಳಿ, ರಂಗಪ್ಪ ಕರಮಡಿ, ಮಲ್ಲಪ್ಪ ವಗ್ಗನ್ನವರ, ಕೀರಪ್ಪ ಕಲ್ಲಮನಿ, ಯಲ್ಲಪ್ಪ ಕಡಿವಾಲ, ಸಿದ್ದಪ್ಪ ವಗ್ಗನ್ನವರ, ಅಲಿಸಾಬ ವಾಲೀಕಾರ,ಶಿವಪ್ಪ ಗೊರವರ, ಬಾಲಪ್ಪ ಬಿಷ್ಠನ್ನವರ, ಪ್ರಭು ಗೊರವರ, ರಾಜೇಸಾಬ ಗುಡೂರ, ಮಲ್ಲಪ್ಪ ಗೊರವರ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net