ಹುಲಿಮಂಗಲ ಗ್ರಾಪಂನಲ್ಲಿ ಕೈ ಪಾರುಪಾತ್ಯ

anekla gp elction
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ಹುಲಿಮಂಗಲ ಗ್ರಾಪಂ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪಿಳ್ಳಮ್ಮ, ಉಪಾಧ್ಯಕ್ಷರಾಗಿ ಶೀಲಾ ಆಯ್ಕೆಯಾದರು.
44 ಸದಸ್ಯ ಬಲದ ಗ್ರಾಪಂನಲ್ಲಿ ನಿಗದಿಯಾಗಿದ್ದ ಚನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಿಳ್ಳಮ್ಮ 32 ಮತ ಪಡೆದು ಜಯಗಳಿಸಿದರು. ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಶಿಲ್ಪಾ ಸುರೇಶ್ 12 ಮತ ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೆಹಬೂಬ್ ಷರೀಪ್ 33 ಮತ ಪಡೆದು ಜಯಗಳಿಸಿದರೆ, ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಣೇಶ್ 11 ಮತ ಪಡೆದು ಸೋಲನ್ನು ಕಂಡರು.
ನೂತನ ಅಧ್ಯಕ್ಷೆ ಪಿಳ್ಳಮ್ಮ ಮಾತನಾಡಿ, ಹುಲಿಮಂಗಲ ಗ್ರಾಪಂ ವ್ಯಾಪ್ತಿಯಲ್ಲಿ ಈ ಭಾಗದಲ್ಲಿ ಹೊರರಾಜ್ಯದಿಂದ ಸಾಕಷ್ಟು ಜನ ಕಾರ್ಮಿಕರು ಇಲ್ಲಿಗೆ ಆಗಮಿಸಿ, ಜೀವನ ನಡೆಸುತ್ತಿದ್ದಾರೆ. ಮೂಲ ಸೌಕರ್ಯ ಹಾಗೂ ಕುಡಿಯುವ ನೀರಿಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಎಲ್ಲ ಸದಸ್ಯರ ಜತೆ ಸಮಾಲೋಚನೆ ನಡೆಸಿ, ಹೆಚ್ಚಿನ ಅನುದಾನ ತಂದು ಕೆಲಸ ಮಾಡುವುದಾಗಿ ಹೇಳಿದರು.
ಸದಸ್ಯರಾದ ಮಂಜುನಾಥ್, ಅಮರಾವತಿ ರಾಜಪ್ಪ, ಅನ್ಸರ್, ಯೂನೂಸ್, ಜಿತೇಂದ್ರ, ಶುಭಾ ಚಂದ್ರಶೇಖರ್, ಕಲ್ಪನಾ ರಮಣಿ, ಕಾಂಗ್ರೆಸ್ ಮುಖಂಡರಾದ ಅನಿಲ್ ಕುಮಾರ್, ಶ್ರೀಧರ್, ಸುಜಯ್, ವಿನೋದ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net