

ಕಾನಹೊಸಹಳ್ಳಿ: ಬೆಂಕಿ ಆಕಸ್ಮಿಕದಿಂದ ಹುಲಿಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕನಕಾಂಬರ ಹೂವಿನ ತೋಟ ಸೋಮವಾರ ಸಂಪೂರ್ಣ ಭಸ್ಮವಾಗಿದೆ. ಹುಲಿಕೆರೆ ರೈತ ಎಸ್.ಕೆ.ತಿಪ್ಪೇಸ್ವಾಮಿ ಎಂಬುವವರಿಗೆ ಸೇರಿದ ತೋಟವಾಗಿದೆ. ನಾಲ್ಕೈದು ವರ್ಷಗಳಿಂದ ತೋಟದಲ್ಲಿ ಕನಕಾಂಬರ ಹೂವು ಬೆಳೆಯುತ್ತಿದ್ದರು. ಸೋಮವಾರ ಹೂವಿನ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಕನಕಾಂಬರ ಬೆಳೆ ಹಾಗೂ ತೆಂಗಿನ ಮರಗಳು ಸುಟ್ಟು ಭಸ್ಮವಾಗಿ ಅಪಾರ ನಷ್ಟವಾಗಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.