ಹುಲಿಗೆಪ್ಪಗೆ ಒಲಿದ ‘ಮಾಡಳ್ಳಿ’ ಪಟ್ಟ

MADALLI
Published on

ಲಕ್ಷ್ಮೇಶ್ವರ: ತಾಲೂಕಿನ ಮಾಡಳ್ಳಿ ಗ್ರಾಪಂ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹುಲಿಗೆಪ್ಪ ಕೆರೆಣ್ಣವರ ಮತ್ತು ಉಪಾಧ್ಯಕ್ಷೆಯಾಗಿ ನಿರ್ಮಲಾ ಬೆಟದೂರ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಒಟ್ಟು 11 ಸದಸ್ಯ ಸ್ಥಾನಗಳನ್ನು ಹೊಂದಿರುವ ಗ್ರಾಪಂನ ಅಧ್ಯಕ್ಷ ಸ್ಥಾನಕ್ಕೆ ಹುಲಿಗೆಪ್ಪ ಕೆರೆಣ್ಣವರ, ಬಸವರೆಡ್ಡಿ ಮರಡೂರ ನಾಮಪತ್ರ ಸಲ್ಲಿಸಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಕವಿತಾ ಸಂಕನಗೌಡ್ರ ಸಲ್ಲಿಸಿದ್ದ ನಮಪತ್ರ ವಾಪಸ್ ಪಡೆದಿದ್ದರಿಂದ ನಿರ್ಮಲಾ ಬೆಟದೂರ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳು ತಲಾ 5 ಮತಗಳನ್ನು ಪಡೆದಿದ್ದರು. 1 ಮತ ತಿರಸ್ಕೃವಾಗಿದ್ದರಿಂದ ಚೀಟಿ ಎತ್ತುವ ಅದೃಷ್ಟದಾಟದಲ್ಲಿ ಹುಲಿಗೆಪ್ಪ ಕೆರೆಣ್ಣವರ ಗೆಲುವಿನ ನಗೆ ಬೀರಿದರು. ಬಿ.ಎನ್ ಗಾಯಕವಾಡ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net