

ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದ ಹುಲಗೆಮ್ಮ ದೇವಿ ದೇವಾಲಯದ ಹುಂಡಿ ಎಣಿಕೆ ನಡೆದಿದ್ದು, 43 ದಿನಗಳಲ್ಲಿ 72,85,175ರೂ. ನಗು, 125 ಗ್ರಾಂ ಕಚ್ಛಾ ಚಿನ್ನ ಮತ್ತು 8 ಕೆ.ಜಿ.ಕಚ್ಚಾ ಬೆಳ್ಳಿ ಸಂಗ್ರಹವಾಗಿದೆ.
ಬುಧವಾರ ರಾತ್ರಿವರೆಗೂ ಎಣಿಕೆ ನಡೆದಿದ್ದು, ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ಸಕ್ತಿ ಯೋಜನೆ ಜಾರಿ ಬಳಿಕ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದ್ವಿಗುಣಗೊಂಡಿದೆ.
ಹೀಗಾಗಿ ಬೇಗನೇ ಹುಂಡಿ ಭರ್ತಿಯಾಗುತ್ತಿದೆ. ಕಳೆದ ಬಾರಿ 51 ದಿನಕ್ಕೆ ಹುಂಡಿ ಎಣಿಸಿದ್ದರೆ, ಈಬಾರಿ 43 ದಿನಗಳಿಗೆ ಎಣಿಕೆ ಆರಂಭಿಸಲಾಗಿದೆ.
ನಿತ್ಯ ರಾಜ್ಯ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿ ವಿವಿಧ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದ ದೇವಾಲಯದ ಆದಾಯವೂ ವೃದ್ಧಿಯಾಗುತ್ತಿದೆ.