ರೈತರೇ ಸದುಪಯೋಗ ಪಡೆದುಕೊಳ್ಳಿ

6 Hulsur 1
ಹುಲಸೂರಿನ ಪಿಕೆಪಿಎಸ್ ಸಹಕಾರ ಸಂಘದಲ್ಲಿ ಭಾನುವಾರ ಸರ್ಕಾರದ ಬೆಂಬಲ ಬೆಲೆಗೆ ಹೆಸರು ಕಾಳು ಖರೀದಿಗೆ ಸಂಘದ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಓಂಕಾರ ಪಟ್ನೆ ಚಾಲನೆ ನೀಡಿದರು. ಕಾಶೀನಾಥ ಪಾಟೀಲ್, ಬಸವರಾಜ ಹಾರಕೂಡೆ, ಅಶೋಕ ಮೇತ್ರೆ, ನಂದಕುಮಾರ ಇತರರಿದ್ದರು.
Published on

ಹುಲಸೂರು: ರೈತರು ಬೆಳೆದ ಬೆಳೆಗಳಿಗೆ ಸರ್ಕಾರದ ಆದೇಶದಂತೆ ಬೆಂಬಲ ಬೆಲೆಯಲ್ಲಿ ಉದ್ದು, ಹೆಸರು, ಸೋಯಾ ಖರೀದಿ ಮಾಡಲಾಗುತ್ತಿದ್ದು, ಈಗಾಗಲೇ ಹೆಸರು ಖರೀದಿ ಕೇಂದ್ರ ಪ್ರಾರಂಭವಾಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ , ಪಿಕೆಪಿಎಸ್ ಸಹಕಾರ ಸಂಘದ ಅಧ್ಯಕ್ಷ ಓಂಕಾರ ಪಟ್ನೆ ಹೇಳಿದರು.

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭಾನುವಾರ ಹೆಸರು ಕಾಳು ಖರೀದಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಸವಕಲ್ಯಾಣ ಹಾಗೂ ಹುಲಸೂರು ತಾಲೂಕಿನ ಕೆಲ ಪಿಕೆಪಿಎಸ್ ಸಹಕಾರ ಸಂಘದಲ್ಲಿ ಈಗಾಗಲೇ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು ರೈತರು ಬೆಳೆದ ಹೆಸರು ಕಾಳು ಖರೀದಿ ಮಾಡುತ್ತಿದ್ದು, ಸೋಯಾ ಹಾಗೂ ಉದ್ದು ಖರೀದಿಗಾಗಿ ಆನ್‌ಲೈನ್ ಮೂಲಕ ಎಫ್‌ಐಡಿ ಪಡೆದು ನೋಂದಣಿ ಪ್ರಾರಂಭ ಮಾಡಲಾಗಿದೆ. ಸೋಯಾ ಕ್ವಿಂಟಾಲ್​ಗೆ ೪೮೯೨ ರೂ., ಹೆಸರು ೮೬೮೨ ರೂ. ಹಾಗೂ ಉದ್ದು ೭೪೦೦ ಪ್ರತಿ ಕ್ವಿಂಟಾಲ್‌ಗೆ ಬೆಂಬಲ ಬೆಲೆ ಘೋಷಣೆಯಾಗಿದ್ದು, ಆಸಕ್ತ ರೈತರು ಸೋಯಾ ಮಾರಾಟ ಮಾಡಲು ಸಂಘದಲ್ಲಿ ಆದಷ್ಟು ಬೇಗನೆ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪಿಕೆಪಿಎಸ್ ಸಹಕಾರ ಸಂಘದ ಉಪಾಧ್ಯಕ್ಷ ಕಾಶೀನಾಥ ಪಾಟೀಲ್ ಮಾತನಾಡಿ, ರೈತರು ಬೆಳೆದ ಧಾನ್ಯಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆಗೆ ಪಡೆಯುತ್ತಿರುವುದು ಸಂತಸ ತಂದಿದೆ. ಖರೀದಿ ಕೇಂದ್ರಗಳು ಪ್ರತಿವರ್ಷ ಪ್ರಾರಂಭವಾದರೆ ದಲ್ಲಾಳಿಗಳ ಹಾವಳಿ ಕಡಿಮೆಯಾಗುತ್ತದೆ ಎಂದರು.
ಸAಘದ ನಿರ್ದೇಶಕರಾದ ಬಸವರಾಜ ಹಾರಕೂಡೆ, ಅಶೋಕ ಮೇತ್ರೆ, ಸಿಇಒ ನಂದಕುಮಾರ ಮುಸ್ತಾಪುರೆ, ಪ್ರಮುಖರಾದ ಪ್ರೇಮಸಾಗರ ಕಾಡಾದಿ, ಅನಿಲಕುಮಾರ ತಾಂಬೋಳೆ, ಮಲ್ಲಿಕಾರ್ಜುನ ಪಾಟೀಲ್, ರಾಮಲಿಂಗಯ್ಯ ಶಾಸ್ತ್ರಿ, ಬಸವರಾಜ ಹಲಗರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net