

ಹುಲಸೂರು: ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಅಷ್ಟೇ ಅಲ್ಲ ವಿಶ್ವದ ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಬೇಕು ಎಂದು ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಬಸವ ಜಯಂತಿ ಪ್ರಯುಕ್ತ ಪಟ್ಟಣದ ಅಲ್ಲಮ ಪ್ರಭು ಶೂನ್ಯ ಪೀಠ ಅನುಭವ ಮಂಟಪದ ಪರಿಸರದಲ್ಲಿ ಬಸವ ಉತ್ಸವ ಸಮಿತಿ ಹಾಗೂ ವಿವಿಧ ಸಂಘಟನೆಗಳಿಂದ ಭಾನುವಾರ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ದೇಶದಲ್ಲಿ ಬೇರೆ ಬೇರೆ ಧರ್ಮ ಗುರುಗಳು ನಮ್ಮ ಧರ್ಮಕ್ಕೆ ನಾನೇ ಶ್ರೇಷ್ಠ ಎಂದು ಹೇಳಿಕೊಂಡಿದ್ದಾರೆ. ಆದರೆ ಬಸವಣ್ಣನವರು ತಾನು ಎಲ್ಲರಕ್ಕಿಂತಲೂ ಕಿರಿಯ. ಇಡೀ ಮಾನವ ಧರ್ಮ ಶ್ರೇಷ್ಠ ಎಂದು ಹೇಳಿದ ಏಕೈಕ ನಾಯಕರಾಗಿದ್ದಾರೆ ಎಂದು ಹೇಳಿದರು.
೧೨ನೇ ಶತಮಾನದಲ್ಲಿ ಎಲ್ಲ ಧರ್ಮಿಯರನ್ನು ಒಂದೆಡೇ ಸೇರಿಸಿ ಸಮಾನತೆಯ ಸಂದೇಶವನ್ನು ಸಾರಿ, ಸ್ತ್ರೀಯರಿಗೆ ಸಮಾನವಾದ ಹಕ್ಕು ನೀಡಿದ್ದರು. ಬರೀ ಬಸವಣ್ಣನವರ ಜಯಂತಿ ಆಚರಿಸಿದರೆ ಸಾಲದು, ಅವರು ಬರೆದಿರುವ ವಚನಗಳನ್ನು ಓದಿ ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಕಿವಿಮಾತು ಹೇಳಿದರು.
ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ , ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ , ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ, ಸದಸ್ಯ ವಿದ್ಯಾಸಾಗರ ಬನಸೂಡೆ, ಜಾಗತಿಕ ಲಿಂಗಾಯತ ಮಹಾಸಭೆ ತಾಲೂಕು ಘಟಕದ ಅಧ್ಯಕ್ಷ ಪ್ರವೀಣ ಕಾಡಾದಿ, ಪ್ರಮುಖರಾದ ಬಾಬುರಾವ ಗೌಂಡಗಾವೆ, ರಣಜಿತ ಗಾಯಕವಾಡ , ಸಚಿನ ಕೌಟೆ , ಆಕಾಶ ಖಂಡಾಳೆ, ಶಿವರಾಜ ಖಪಲೆ, ಲೋಕೇಶ ಧಬಾಲೆ, ಶಿವರಾಜ ಚಾಕೋತೆ, ಲೋಹಿತ ಧರ್ಮಣೆ, ಬಾಬುರಾವ ಮಲೋದೆ, ಕಲ್ಯಾಣಿ ದಾನಾ, ದಯಾನಂದ ಪಟ್ನೆ , ಶ್ರೀಶೈಲ ಹಾರಕೂಡೆ, ಬಸವರಾಜ ಮುಕ್ತಾ, ರಾಜಕುಮಾರ ತೊಂಡಾರೆ , ರಾಜಕುಮಾರ ನಿಡೋದೆ, ರಾಮ ಅಗ್ರೇ, ಪ್ರದೀಪ ಪಾರಶೆಟ್ಟಿ ಇತರರಿದ್ದರು.
ಅಲ್ಲಮ ಪ್ರಭು ಶೂನ್ಯ ಪೀಠ ಅನುಭವ ಮಂಟಪ ಪರಿಸರದಿಂದ ಪ್ರಾರಂಭವಾದ ಬೈಕ್ ರ‍್ಯಾಲಿ ಗಾಂಧಿ ವೃತ್ತ, ಸಂತ ರಘುನಾಥ ಮಹಾರಾಜ ಸಂಸ್ಥಾನ ಮಠದ ಮುಂಭಾಗದಿಂದ ಬೀದರ್-ಲಾತೂರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಸವೇಶ್ವರ ವೃತ್ತದವರಿಗೆ ಜೈಘೋಷಗಳ ಮಧ್ಯೆ ನಡೆಯಿತು.