ಸತ್ಯ ಶುದ್ಧ ಕಾಯಕದಿಂದ ನೆಮ್ಮದಿ ಜೀವನ

27_Hulsur_2
ಹುಲಸೂರಿನ ಗಾಂಧಿ ವೃತ್ತದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಪ್ರವಚನಕ್ಕೆ ಶಾಸಕ ಶರಣು ಸಲಗರ ಚಾಲನೆ ನೀಡಿದರು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಹಾವಗಿಲಿಂಗ ಶಿವಾಚಾರ್ಯರು, ಶ್ರೀ ಶಿವಾನಂದ ಸ್ವಾಮೀಜಿ, ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ, ಶಿವಲೀಲಾ ಮಠಪತಿ ಇತರರಿದ್ದರು.
Published on

ಹುಲಸೂರು: ಸತ್ಯ ಶುದ್ಧ ಕಾಯಕದಿಂದ ನೆಮ್ಮದಿ ಜೀವನ ಸಾಧ್ಯ ಎಂದು ಗುರುಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.

ಪಟ್ಟಣದ ಗಾಂಧಿ ವೃತ್ತದಲ್ಲಿ ಕೈಲಾಸ ಪತಿ ಮಹಾದೇವ ಮಂದಿರದ ಕಳಸಾರೋಹಣ ಮತ್ತು ಶಿವಲಿಂಗ, ನಂದಿ ಮೂರ್ತಿ ಸ್ಥಾಪನೆ ನಿಮಿತ್ತ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಪ್ರವಚನದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದಾನ, ಧರ್ಮ ಪರೋಪಕಾರ ಮಾಡಿದಾಗ ಮಾತ್ರ ಯಾವುದೇ ಸಮಸ್ಯೆ, ತಾಪತ್ರಯ ಬರುವುದಿಲ್ಲ. ಜಗತ್ತಿನಲ್ಲಿ ಯಾರೂ ಶ್ರೇಷ್ಠರಲ್ಲ. ಶುದ್ಧ ಮನಸ್ಸಿನಿಂದ ಧರ್ಮ ಕಾರ್ಯದಲ್ಲಿ ತೊಡಗಿದವರು ಶ್ರೇಷ್ಠರಾಗುತ್ತಾರೆ. ಪ್ರವಚನ, ಕೀರ್ತನ, ಸಂತರ ವಾಣಿಗಳನ್ನು ಆಲಿಸಬೇಕು ಎಂದು ಹೇಳಿದರು.

ಹಲಬರ್ಗಾ, ಶಿವಣಿ ಮಠದ ಶ್ರೀ ಹಾವಗಿಲಿಂಗ ಶಿವಾಚಾರ್ಯರು ಮಾತನಾಡಿ, ತಾವು ಮಾಡಿರುವ ದಾನ ಇನ್ನೊಬ್ಬರಿಗೆ ತಿಳಿಯದಂತಿರಬೇಕು. ಅಹಂ ಬರದಂತೆ ಇನ್ನೊಬ್ಬರಿಗೆ ಉಪಕಾರ ಮಾಡುವುದನ್ನು ಕಲಿಯಬೇಕು. ಭಕ್ತಿಯಿಂದ ಸ್ಮರಣೆ ಮಾಡುವವರಿಗೆ ದೇವರು ಒಲಿಯುತ್ತಾನೆ ಎಂದರು.

ಶಾಸಕ ಶರಣು ಸಲಗರ ಕಾರ್ಯಕ್ರಮ ಉದ್ಘಾಟಿಸಿದರು. ಸಾಯಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ತಾಲೂಕು ದಂಡಾಧಿಕಾರಿ ಶಿವಾನಂದ ಮೇತ್ರೆ, ಪಿಎಸ್‌ಐ ನಾಗೇಂದ್ರ ಮಾತನಾಡಿದರು.

ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ, ಸದಸ್ಯರಾದ ದೇವಿಂದ್ರ ಭೋಪಳೆ, ವಿದ್ಯಾಸಾಗರ ಬನಸೂಡೆ, ನಾಗೇಶ ಮೇತ್ರೆ, ಬಿಜೆಪಿ ತಾಲೂಕು ಅಧ್ಯಕ್ಷ ಅಶೋಕ ವಕಾರೆ, ಕಾಶೀನಾಥ ಪಾರಶೆಟ್ಟೆ, ರಣಜೀತ ಗಾಯಕವಾಡ, ಶಿವಲೀಲಾ ಮಠಪತಿ, ಮಾಳಪ್ಪ ವಗ್ಗೆ, ಜಗನ್ನಾಥ ಮೇಹಕರೆ, ಸೂರ್ಯಕಾಂತ ವಗ್ಗೆ, ದೇವೇಂದ್ರ ಜಿರೋಬೆ, ವೈಜಿನಾಥ ಸ್ವಾಮಿ, ಸೋಪಾನ, ಬಾಬುರಾವ ಕುಂಬಾರ, ರಾಜಪ್ಪ ಮಾಡದೆ ಇತರರಿದ್ದರು. ರಾಜಕುಮಾರ ಹೊನ್ನಾಡೆ ಸ್ವಾಗತಿಸಿ ನಿರೂಪಣೆ ಮಾಡಿದರು. ಲೋಕನಾಥ ಚಾಂಗಲೇರಾ ಅವರ ಸಂಗೀತ ಜನಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net