

ಸ್ಥಳೀಯ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ನಲ್ಲಿ ಇದೇ 9ನೇ ಶನಿವಾರದಂದು ನಾಲ್ಕನೇ (ಸಮ್ಯಕ್ತಾ)ಬ್ಯಾಚಿನ ಪ್ರಥಮ ವರ್ಷದ Bsc ನರ್ಸಿಂಗ್ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್ ಕಾರ್ಯಕ್ರಮದಲ್ಲಿ ಪ್ರತಿಯೊಂದು ಕಾರ್ಯಕ್ಕೂ ಮುನ್ನ ಒಂದು ಜ್ಯೋತಿ ಬೆಳಗುವಿಕೆಯು ಎಷ್ಟು ಶ್ರೇಷ್ಠವಾಗುತ್ತದೋ ಹಾಗೇ ಸಹ ಮಿಸ್ಟರ್ ಸ್ಟೀಪನ್ ಜಾನ್ ಅವರ ಮುಖಾಂತರ ಶಿಕ್ಷಕರಾದ ಶ್ರೀ ಅಂಬರೀಶ್ ಮತ್ತು ಶಿಕ್ಷಕಿಯಾದ ಸುಮಾ ಇರ್ವರು ವಿದ್ಯಾರ್ಥಿಗಳ ಕೈಲಿಹ ಮೊಂಬತ್ತಿಯನ್ನು ಬೆಳಗಿಸಿ 'ದಿ ಲೇಡಿ ವಿತ್ ದಿ ಲ್ಯಾಂಪ್' ಎಂದೇ ಪ್ರಖ್ಯಾತಿಯಾದ ಫ್ಲಾರೆನ್ಸ್ ನೈಟಿಂಗೇಲ್ ಪ್ರತಿಜ್ಞಾ ವಿಧಿ ಹೇಳುವ ಮುಖಾಂತರ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಡಾ. ಬಸವರಾಜ ಎಚ್ ಅಸಿಸ್ಟೆಂಟ್ ರೆಜಿಸ್ಟರ್ RGUHS ಬೆಂಗಳೂರು ಇವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ನರ್ಸಿಂಗ್ ಪ್ರವೃತ್ತಿಗೆ ದಾರಿ ದೀಪವಾಗಿರುವ ಫ್ಲೋರೆನ್ಸ್ ನೈಟಿಂಗೇಲ್ ಅವರ ಕುರಿತು ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಸಂಜಯ್ ಪೀರಾಪೂರ ಪ್ರಿನ್ಸಿಪಾಲ್ KLE ಕಾಲೇಜ್ ನರ್ಸಿಂಗ್ ಹುಬ್ಬಳ್ಳಿ ಅವರು ಕಾರ್ಯಕ್ರಮದ ಕುರಿತು ವಿದ್ಯಾರ್ಥಿಗಳಿಗೆ ಸಮಯಪ್ರಜ್ಞೆ ಎಂಬುದು ತುಂಬಾ ಮುಖ್ಯ,ಹಾಗೇ ಈ ಪ್ರವೃತ್ತಿಯಲ್ಲಿ ಸೇವಾಮನೋಭಾವವನ್ನು ಇಟ್ಟುಕೊಂಡು ನಿರ್ವಹಿಸುವಂತ ಒಂದೊಳ್ಳೆ ಮಾರ್ಗ ಎಂದು ಹೇಳಿದರು. ಈ ಸಂದರ್ಭದಲ್ಲಿ ಮತ್ತೋರ್ವ ಅತಿಥಿಗಳಾದ ಶ್ರೀ ಎಸ್ ಎಮ್ ಕರ್ಪೂರಮಠ ಜನರಲ್ ಸೆಕ್ರೆಟರಿ RKM ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವಿಜಯಪುರ ಇವರು ಈ ವೃತ್ತಿಯಲ್ಲಿ ಸಾಕಷ್ಟು ವಿಭಿನ್ನ ಮಾರ್ಗಗಳುಂಟು ಹಾಗೇ ತ್ವರಿತವಾದ ಅವಕಾಶಗಳು ತುಂಬಾ ಇವೆ ಅವುಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಶ್ರೀ ಪ್ಯಾರಲೆ ನೂರಾನಿ ಅವರು RMSS ಶಿಕ್ಷಣ ಸಂಸ್ಥೆಯ ಬೆಳವಣಿಗೆ ಕುರಿತು ಸಂತಸವಿದೆ ಸದಾ ನಮ್ಮ ಸಹಕಾರವಿರುತ್ತದೆ ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗ್ರಾಮೀಣ ವೈದ್ಯಕೀಯ ಸೇವಾ ಸಂಘದ ಅಧ್ಯಕ್ಷರಾದ ಸದಾ ಕ್ರಿಯಾಶೀಲ,ಉತ್ಸಾಹದ ಚಿಲುಮೆಯಾದ ಡಾ. ಎಸ್ ಆರ್ ನಾಗನೂರರವರು ಈ ಪ್ರವೃತ್ತಿ ಕ್ಷೇತ್ರದಲ್ಲಿನ ಸೌಲಭ್ಯಗಳ ಕುರಿತು ಹೇಳುತ್ತಾ ಹಾಗೇ ಹಾಸ್ಪಿಟಲ್ ನಲ್ಲಿ ಸಹ ಉದ್ಯೋಗಿಗಳಾಗಿರಬಹುದು, ವಿದ್ಯಾರ್ಥಿಗಳಿಗೆನೆ ಆಗಿರಬಹುದು ನರ್ಸಿಂಗ್ ರೌಂಡ್ಸ್ ಅಲ್ಲಿ ಹೆಚ್ಚಿನ ಕಲಿಕೆಗೆ ಪ್ರೋತ್ಸಾಹಿಸುತ್ತಾ ವಿವರವಾಗಿ ಮಾರ್ಗದರ್ಶನ ತೋರುವುದರೊಂದಿಗೆ, . ಶ್ರೀ ಸ್ಟೀಫನ್ ಜಾನ್ BOS ಅಧ್ಯಕ್ಷರು, ಸಹ ಪ್ರಾಧ್ಯಾಪಕರು ಜೀಮ್ಸ್ ಗದಗ ಅವರು RMSS ಶಿಕ್ಷಣ ಸಂಸ್ಥೆಯ ಬೆಳವಣಿಗೆಯ ಕುರಿತು ಹಾಗೇ ಪ್ರಥಮ,ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ವಾರ್ಷಿಕ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಹೆಮ್ಮೆ ಪಡುವ ಸಾಧನೆಗಳನ್ನು ಮಾಡಿದ ವಿದ್ಯಾರ್ಥಿಗಳನ್ನು ಪ್ರಶಂಸಿಸುತ್ತಾ ಕೆಲವೊಂದು ಸಲಹೆಗಳನ್ನು ನೀಡಿದರು. ಡಾ. ವೇಮನ್ ಸಾವಕಾರ ಹಾನರರಿ ಸೆಕ್ರೆಟರಿ RMSS ಮೆಡಿಕಲ್ ಸರ್ವಿಸ್ ಸೊಸೈಟಿ ಇವರು ಸಹ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ತೂಕವನ್ನು ಹೆಚ್ಚಿಸಿದರು.
ಪ್ರಾಂಶುಪಾಲರಾದ ಶ್ರೀ ಬಸಯ್ಯ ಹಿರೇಮಠ ಇವರು ಕಾಲೇಜಿನ ಶೈಕ್ಷಣಿಕ ವರ್ಷದ ಬೆಳವಣಿಗೆಯ ಕುರಿತು ವರದಿ ನೀಡುವುದರೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿದಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಮತ್ತು ವಿದ್ಯಾರ್ಥಿಗಳು ಬಹು ಸಂಭ್ರಮದಿಂದ ತಮ್ಮದೇ ಆದ ಕಲೆಯನ್ನು ಪ್ರದರ್ಶಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಜರುಗಿದವು.
ಈ ಕಾರ್ಯಕ್ರಮದ ನಿರ್ವಹಣೆಯನ್ನು ಕಾಲೇಜಿನ ಉಪನ್ಯಾಸಕರೆಲ್ಲ ಬಹಳ ಚೆನ್ನಾಗಿ ನಿರ್ವಹಿಸಿದರು.