ಸ್ಪರ್ಧಾತ್ಮಕ ಮನೋಭಾವನೆ ಯಶಸ್ವಿಗೆ ಸೋಪಾನ: ಎಲ್​ ಎಸ್​ ಪಾಟೀಲ

Published on

ವಿಜಯವಾಣಿ ಸುದ್ದಿಜಾಲ ಗದಗ

ಆಧುನಿಕ ಯುಗದಲ್ಲಿ ಸತತ ಅಧ್ಯಯನದೊಂದಿಗೆ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಯಶಸ್ಸು ಹೊಂದಲು ಸಾಧ್ಯ ಎಂದು ಹುಲಕೋಟಿ ಸಹಕಾರಿ ಶಿಣ ಸಂಸ್ಥೆಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಎಲ್​. ಎಸ್​. ಪಾಟೀಲ ವಿದ್ಯಾಥಿರ್ಗಳಿಗೆ ಕರೆ ನೀಡಿದರು.

ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬಿ. ಕಾಂ. ಪ್ರಥಮ ವರ್ಷದ ವಿದ್ಯಾಥಿರ್ಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಶಸ್ಸಿಗೆ ಶಾರ್ಟಕಟ್​ ಇರುವುದಿಲ್ಲ. ನಿರಂತರ ಸಾಧನೆ ಅಗತ್ಯ. ಈಗಿನಿಮದಲೇ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡರೆ ಪದವಿ ಮುಕ್ತಾಯದ ಹಂತದಲ್ಲಿ ಜೀವನದ ಮಾರ್ಗ ಬದಲಾಗಿ ಯಶಸ್ಸು ದೊರೆಯುತ್ತದೆ ಎಂದರು.

ಉಪ ಪ್ರಾಚಾರ್ಯ ಪ್ರೊ. ಎಸ್​. ಜಿ. ಉಳಿಗೇರ ಮಾತನಾಡಿ, ಯುವಕರೇ ದೇಶದ ಸಂಪತ್ತಾಗಿರುವುದರಿಂದ ವಿಶೇಷ ಔದ್ಯೋಗಿಕ ಕೌಶಲ್ಯಗಳನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಶ್ರೇಷ್ಠ ಉದ್ಯಮಿಗಳಾಗಿ ಹೊರಹೊಮ್ಮಬೇಕು ಎಂದರು.

ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಎಸ್​. ಎನ್​. ಶ್ಯಾಗೋಟಿ ಮಾತನಾಡಿ, ವಿದ್ಯಾಥಿರ್ ಜೀವನವು ಬಹಳ ಮಹತ್ವದ್ದಾಗಿದೆ. ಅಧ್ಯಯನ ಶೀಲತೆ, ಕರ್ತವ್ಯಪ್ರಜ್ಞೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ವಿಶೇಷ ಸಾಧನೆ ಮಾಡಿ ಮಾಹಾವಿದ್ಯಾಲಯಕ್ಕೆ ಕೀತಿರ್ ತರಲು ತರಬೇಕುಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ವಿದ್ಯಾಥಿರ್ಗಳನ್ನು ಹೂಗುಚ್ಚ ನೀಡುವುದರ ಮೂಲಕ ಸ್ವಾಗತ ಕೋರಲಾಯಿತು.

ಯೋಜನಾ ವಿಭಾಗದ ಮುಖ್ಯಸ್ಥ ಪ್ರೊ. ಡಿ. ಎಂ. ಡಂಕೇದ, ಉಪನ್ಯಾಸಕ ಪ್ರೊ. ಎಂ. ಬಿ. ಅಕ್ಕಿ, ಡಾ. ಎಂ. ಬಿ. ಮಡ್ಡಿ, ಪ್ರೀತಿ ವರದಾ, ಶೋಭಾ ಸಣ್ಣಪ್ಯಾಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net