ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡಕ್ಕೆ ತನ್ನದೇ ವಿಶೇಷ ಸ್ಥಾನವಿದೆ: ಡಾ. ಶಿವಪ್ಪ ಕುರಿ

08GDG02
Published on

ವಿಜಯವಾಣಿ ಸುದ್ದಿಜಾಲ ಗದಗ
ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡಕ್ಕೆ ತನ್ನದೇ ಆದ ವಿಶೇಷ ಸ್ಥಾನವಿದೆ. ವಿದ್ಯಾಥಿರ್ಗಳು ಕೆಎಎಸ್​, ಐಎಎಸ್​ ಮತ್ತು ಇತರೆ ಪರೀೆಗಳನ್ನು ಕನ್ನಡದಲ್ಲಿಯೇ ಬರೆಯಬಹುದು. ಅರಿಯದ ಭಾಷೆಯಲ್ಲಿ ಪರೀೆಗಳನ್ನು ಬರೆಯುವುದಕ್ಕಿಂತ ಮಾತೃಭಾಷೆಯಲ್ಲಿ ಪರೀೆಯನ್ನು ಬರೆಯುವುದು ಉತ್ತಮ ಎಂದು ಹುಲಕೋಟಿಯ ಕೆ. ಎಚ್​. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಿವಪ್ಪ ಕುರಿ ಹೇಳಿದರು.
ತಾಲೂಕಿನ ಹುಲಕೋಟಿ ಗ್ರಾಮದ ಕೆ. ಎಚ್​. ಪಾಟೀಲ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ "ಸ್ಪರ್ಧಾತ್ಮಕ ಉಪಯೋಗಿ ಸಾಮಾನ್ಯ ಕನ್ನಡ ವ್ಯಾಕರಣ' ಸಟಿರ್ಫಿಕೇಟ್​ ಕೋರ್ಸ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಯು ಬಹಳ ಸುಲಭ ಎಂದು ಅನಿಸಿದರೂ ಸಹ ಅಭ್ಯಥಿರ್ಗಳಿಗೆ ಸಾಮಾನ್ಯ ಕನ್ನಡ ವ್ಯಾಕರಣದ ಜ್ಞಾನ ಇರುವುದಿಲ್ಲ. ಕನ್ನಡ ವಿಷಯವನ್ನು ಸಾಮಾನ್ಯ ಎಂದು ತಿಳಿಯದೇ, ಅದನ್ನು ಒಂದು ಸ್ಪರ್ಧಾತ್ಮಕ ವಿಷಯ ಎಂದು ತಿಳಿದು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಸುಧಾ ಕೌಜಗೇರಿ ಮಾತನಾಡಿ, ಕನ್ನಡ ವಿಭಾಗದಿಂದ ನಡೆಸಿದ ಈ ಕಾರ್ಯಕ್ರಮದ ಸಟಿರ್ಫಿಕೇಟ್​ ಕೋರ್ಸ್​ ನ್ಯಾಕ್​ ಪ್ರಕ್ರಿಯೆಗೆ ಉಪಯೋಗಕಾರಿ ಆಗಿದೆ. ವಿದ್ಯಾಥಿರ್ಗಳ ಬೌದ್ಧಿಕ ಮಟ್ಟ ಅಧಿಕಗೊಳಿಸುತ್ತದೆ ಎಂದರು.
ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಉಲ್ಲಾಸ ಶೆಟ್ಟಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಲಕ್ಷ$್ಮಣ ಮುಳಗುಂದ , ಡಾ. ಅಪ್ಪಣ್ಣ ಹಂಜೆ, ಡಾ. ಮಂಜುನಾಥ ತ್ಯಾಳಗಡಿ, ಶಶಿಕುಮಾರ್​ ಎನ್​. ಟಿ, ವನಮಾಲ ಖಾನ ಗೌಡ್ರ, ಪದ್ಮಾ ತಳಕಲ, ಮಹಾಂತೇಶ ಗೊರವನಕೊಳ್ಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net