

ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆ ಕಾನೂನು ಮಹಾವಿದ್ಯಾಲಯದಲ್ಲಿ ಕಾಲೇಜು ಒಕ್ಕೂಟ ಜಮಖಾನ ಮತ್ತು ಎನ್.ಎಸ್.ಎಸ್. ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾರ್ಥನಾ ಗೀತೆಯನ್ನು ಕೀರ್ತನಾ ಹಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.
ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆ ಕಾನೂನು ಮಹಾವಿದ್ಯಾಲಯದ ಪ್ರಾಚಾಯರಾದ ಶ್ರೀಮತಿ ಪಲ್ಲವಿ ಎಸ್. ಬುಯ್ಯರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉದ್ಘಾಟಕರಾಗಿ ಆಗಮಿಸಿದ ಪ್ರೊ. ಡಾ. ಸುರೇಶ ನಾಡಗೌಡರ ವಾಯಿಸ್ ಚಾನ್ಸಲರ್ ಮತ್ತು ರಜಿಸ್ಟ್çರ್ ಕರ್ನಾಟಕ ರೂರಲ್ ಡೆವೆಲಪ್‌ಮೆಂಟ ಮತ್ತು ಪಂಚಾಯತರಾಜ್ ಯುನಿವರ್ಶಿಟಿ ಗದಗರವರನ್ನು ಪರಿಚಯಿಸಿದರು.
ಉದ್ಘಾಟಕರಾಗಿ ಆಗಮಿಸಿದ ಪ್ರೊ. ಡಾ. ಸುರೇಶ ನಾಡಗೌಡರ ಮಾತನಾಡಿ ತಮ್ಮ ವಿದ್ಯಾರ್ಥಿ ಜೀವನದ ಕುರಿತು ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡು, ಕಾನೂನಿನಲ್ಲಿ ಇರುವ ವಿವಿಧ ವಿಭಾಗಗಳು ಮತ್ತು ಅವಕಾಶಗಳ ಕುರಿತು ಅರಿವು ಮೂಡಿಸಿದರು. ಕಾನೂನು ಸಮಾಜದ ಕುರಿತು ಯಾವ ರೀತಿಯ ಸಂಬAಧ ಬೆಸೆದುಕೊಂಡಿದೆ ಎಂಬುದರ ಕುರಿತು ತಿಳಿಸಿ, ಕಾನೂನಿನ ಚೌಕಟ್ಟಿನಲ್ಲಿಯೇ ಸಮಾಜದ ಪ್ರತಿಯೊಬ್ಬರ ದೈನಂದಿನ ಚಟುವಟಿಕೆಗಳ ನಿರ್ಧರಿತವಾಗುತ್ತವೆ ಎಂದು ಹೇಳಿದರು. ವಿದ್ಯಾರ್ಥಿಗಳು ಗ್ರಂಥಾಲಯದ ಬಳಕೆ ಮಾಡಿಕೊಂಡು ಕಠಿಣ ಶ್ರಮ ವಹಿಸಿ ವಿದ್ಯಾಭ್ಯಾಸ ಮಾಡಿ ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು. ಮತ್ತು ಪ್ರತಿ ಸೆಮೆಸ್ಟಿರನ ನಂತರ ಕನಿಷ್ಠ ೨ ವಾರ ಇಂಟರ್‌ಶಿಪ್ ಮಾಡಿಕೊಂಡು ಉನ್ನತ ಸ್ಥಾನ ಗಳಿಸಬೇಕೆಂದು ತಿಳಿಸಿದರು. ಕಾನೂನು ಅಂಶಗಳ ಜೊತೆ ಕಂಪ್ಯೂಟರ ಜ್ಞಾನವನ್ನು ಪಡೆದುಕೊಳ್ಳಿ ಅದು ಜಗತ್ತಿನಲ್ಲಿ ಬಹುಮುಖ್ಯ ಎಂದು ತಿಳಿಸಿದರು. ಎಲ್ಲವೂ ಬಹು ಮುಖ್ಯ ಎಲ್ಲದನ್ನು ಕಲಿಯಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಉತ್ತಮ ಜೀವನ ನಡೆಸುವುದು ಎಲ್ಲರ ಉದ್ದೇಶ ನಿಮ್ಮ ಜೀವನಕ್ಕಾಗಿ ನೀವು ಎಲ್ಲವನ್ನು ಕಲಿಯಿರಿ ಎಂದರು. ವಿದ್ಯಾರ್ಥಿ ಸಮಯದಲ್ಲಿ ಯಾರು ಕಲಿಯುವುದಿಲ್ಲವೋ ಅವರು ಎಂದು ಕಲಿಯಲು ಸಾಧ್ಯವಾಗುವುದಿಲ್ಲ. ಯಾವುದೇ ಕ್ಷೇತ್ರದ ಉದ್ಯೋಗಕ್ಕೆ ಹೋದರು ಸಹ ಅಲ್ಲಿ ಮಾದರಿಯಾಗಿ ಬೆಳೆಯಿರಿ ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು. ಕಮ್ಯೂನಿಕೇಶನ್ ಸ್ಕಿಲ್ ತುಂಬಾ ಮುಖ್ಯವಾಗಿದೆ. ಜ್ಞಾನ ಇದು ಹೇಳಲರು ಬರಲಿಲ್ಲ ಅಂದರೆ ಅದು ವ್ಯರ್ಥ ಬಂದವರಿAದ ಬರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಎಂದು ತಿಳಿಸಿದರು. ಕಲಿಯುವಿಕೆ ಎನ್ನುವುದು ಜೀವನ ಪೂರ್ತಿಯಿರುವಂತಹದ್ದು ಎಂದು ತಿಳಿಸಿ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಂದು ಸ್ಫೂರ್ತಿ ತುಂಬಿದರು. ಉದ್ಘಾಟಿಕರಾಗಿ ಆಗಮಿಸಿದ ಅವರನ್ನು ಸನ್ಮಾನಿಸಲಾಯಿತು.
ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ ಪ್ರಥಮ ವರ್ಷದ ವಿದ್ಯಾರ್ಥಿ ಪ್ರಸನ್ನಕುಮಾರವರಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಎಸ್. ಕೆ. ಪಾಟೀಲ ವಕೀಲರು ಚೇರಮನ್ನರು ಹೆಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯರವರು ಮಾತನಾಡಿ ಎಲ್ಲಾ ೫ ವರ್ಷದ ವರ್ಗ ಪ್ರತಿನಿಧಿಗಳಿಗೆ ಸಲಹೆ ನೀಡಿದರು. ನೀವು ಕೇವಲ ಕಲಿಕೆ ಮತ್ತು ಹೊಸತನದಲ್ಲಿ ಗಮನ ವಹಿಸಿ ಎಂದು ತಿಳಿಸಿದರು.