ಸಿದ್ಧಾಂತ ಶಿಕಾಮಣಿಯಲ್ಲಿ ದಶ ಧರ್ಮ ಸೂತ್ರಗಳ ಉಲ್ಲೇಖ

IMG-20230302-WA0014.jpg
Published on


ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಅಹಿಂಸೆ, ಸತ್ಯ, ಅಸ್ತಯ ಬ್ರಹ್ಮಚರ್ಯ, ದಯಾ, ಕ್ಷಮಾ, ಧಾನ, ಪೂಜಾ, ಜಪ, ಧ್ಯಾನ ಎಂಬುದಾಗಿ ದಶ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲರ ಬದುಕು ಬಂಗಾರವಾಗುತ್ತದೆ ಎಂದು  ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಡಾ. ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ  ಹೇಳಿದರು.
ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿಯ ಹಿರೇಮಠದ ಶಾಖೆಯಲ್ಲಿ ಗುರುವಾರ ಜರುಗಿದ ರೇಣುಕಾಚಾರ್ಯರ ಜಯಂತಿಯ ಮಹೋತ್ಸವದಲ್ಲಿ  ಮಾತನಾಡಿದ ಅವರು, ಜಗದ್ಗುರು ರೇಣುಕರ ತತ್ವ ವಿಶ್ವಮಾನ್ಯವಾಗಿದ್ದು, ಸಿದ್ಧಾಂತ ಶಿಕಾಮಣಿಯಲ್ಲಿ ದಶ ಧರ್ಮ ಸೂತ್ರಗಳ ಬಗ್ಗೆ  ಹೇಳಿದ್ದಾರೆ. ರೇಣುಕರು ಬೋಧಿಸಿದ ಸಿದ್ಧಾಂತ ಶಿಕಾಮಣಿ 18 ಭಾಷೆಯಲ್ಲಿ ಲಭ್ಯವಿವೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರು 18 ಭಾಷೆಯ ಸಿದ್ಧಾಂತ ್ಶಿಕಾಮಣಿಯ ಆ್ಯಪ್‌ನ್ನು ಬಿಡುಗಡೆಗೊಳಿಸಿರುವುದು ನಮಗೆ ತಿಳಿದಿರುವ ವಿಚಾರ ಎಂದರು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಜಗದ್ಗುರು ರೇಣುಕರು ಹೇಳಿರುವ ವಿಚಾರಗಳು ಎಲ್ಲರಿಗೂ ಪೂರಕವಾಗಿರುವಂಥದ್ದು. ಇವತ್ತು ನಾವೆಲ್ಲರೂ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯುವುದು ಅವಶ್ಯಕತೆ ಇದೆ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸರಕಾರ ಆಚರಿಸುತ್ತಿರುವುದು ಅಭಿಮಾನದ ಸಂಗತಿ. ಎಲ್ಲಡೆ ರೇಣುಕರ ವಿಚಾರಗಳು ಹೆಚ್ಚು ಜನಜನಿತವಾಗಲಿ ಎಂದರು.
ಇದೇ ಸಂದರ್ಭದಲ್ಲಿ ಯಡಿಯೂರಿನ ಸಿದ್ಧಲಿಂಗೇಶ್ವರ ಪಾಠ ಶಾಲೆಯ ಒಟುವೃಂದರು ವಿಶೇಷ ಪೂಜೆ ಸಲ್ಲಿಸಿದರು.
ವೀರುಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರಯ್ಯ ಸವಡಿಸಾಲಿಮಠ,   ಕಲ್ಲಪ್ಪ ಬೋರಣ್ಣವರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net