ನಾಡಕವಿ ಹುಯಿಲಗೋಳ ನಾರಾಯಣರಾಯರ ಜಯಂತಿ ಆಚರಣೆ.

1696429426623
Published on

ನಗರದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ.ಬಿ.ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯ ಹಾಗೂ ನಾಡಕವಿ  ಹುಯಿಲಗೋಳ ನಾರಾಯಣರಾವ್ ಪ್ರತಿಷ್ಠಾನ ಗದಗ ಇವುಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾದಾನ ಸಮಿತಿಯ ಹೆಣ್ಣು ಮಕ್ಕಳ ಪ.ಪೂ ಕಾಲೇಜಿನ ಉಪನ್ಯಾಸಕರಾದ ಡಾ. ಡಿ. ಎಲ್.ಪಾಟೀಲರವರು ಹುಯಿಲಗೋಳ ನಾರಾಯಣರಾಯರ ಜೀವನದ ಮಹತ್ವದ ಘಟನೆಗಳನ್ನು, ನಾಟಕಗಳ ಬಗ್ಗೆ,ಏಕೀಕರಣದ ಹೋರಾಟದ ಬಗ್ಗೆ,ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮುಂತಾದ ವಿಷಯಗಳನ್ನು ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ರವರು   ಮಾತನಾಡಿ ಅವರು ರಚಿಸಿದ ನಾಡಗೀತೆ ಕರ್ನಾಟಕದ ಏಕೀಕರಣಕ್ಕೆ ಸ್ಪೂರ್ತಿಯಾಗಿ  ಇಂದಿಗೂ ಜನಮಾನಸದಲ್ಲಿ ಸ್ಥಿರವಾಗಿದೆ ಅಲ್ಲದೆ ನಾಡಿಗೆ ಶ್ರೀ ಹುಯಿಲಗೋಳ ನಾರಾಯಣ ರಾಯರ ಕೊಡುಗೆ ಅಪಾರ ಎಂದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ರಚಿಸಿದ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು"  ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪವಿತ್ರ ತೋಟದ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕು ಪದ್ಮಾವತಿ ಬಳ್ಳಾರಿ ಸ್ವಾಗತಿಸಿದರು. ಉಪನ್ಯಾಸಕ ಶ್ರೀ ಎನ್ ಜಿ .ಚನ್ನಪ್ಪ ಗೌಡ್ರ ನಿರೂಪಿಸಿದರು ಕೊನೆಗೆ ರಾಜೇಶ್ವರಿ ಘಾಟಿಗೆ ಎಲ್ಲರಿಗೂ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಬಿ.ಎಡ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net