ಡಾಲು ರವಿ ಬಣಕ್ಕೆ ಭರ್ಜರಿ ಜಯ

KR PETE 1
ಹರಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಡಾಲು ರವಿ ಬಣ ಜಯಗಳಿಸಿತು.
Published on

ಕೆ.ಆರ್.ಪೇಟೆ: ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಹರಪನಹಳ್ಳಿ ಕ್ರಾಸ್ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮನ್‌ಮುಲ್ ನಿರ್ದೇಶಕ ಡಾಲು ರವಿ ಬಣದ 10 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಾಲು ರವಿ ಬಣದ ವೆಂಕಟಾಚಲ 133 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿದ್ದ ವೆಂಕಟೇಶ್ 8 ಮತ ಪಡೆದು ಪರಾಜಯಗೊಂಡಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಕ್ಷೇತ್ರದಿಂದ ಕೆ.ರವಿ(ಡಾಲು ರವಿ), ಮನೋಜ್(ನರಸಿಂಹೇಗೌಡ), ರಾಮೇಗೌಡ, ಸವಿತಾ, ಆರ್.ಸಿ.ಜಯರಾಂ, ಮಂಜೇಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ದೀಪಾಶಂಕರೇಗೌಡ, ಮಣಿಸೋಮಶೇಖರ್, ಬಿಸಿಎಂ(ಎ) ಮೀಸಲು ಕ್ಷೇತ್ರದಿಂದ ಚಂದ್ರಾಚಾರಿ, ಬಿಸಿಎಂ(ಬಿ) ಮೀಸಲು ಕ್ಷೇತ್ರದಿಂದ ವೇದಾವತಿ ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದರು.

ಪ.ಜಾ. ಮೀಸಲು ಕ್ಷೇತ್ರಕ್ಕೆ ವೆಂಕಟಾಚಲ ಮತ್ತು ವೆಂಕಟೇಶ್ ಸ್ಪರ್ಧಾ ಕಣದಲ್ಲಿದ್ದು, ಭಾನುವಾರ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ವೆಂಕಟಾಚಲ ಗೆಲುವು ಸಾಧಿಸಿದರು. ಚುನಾವಣಾಧಿಕಾರಿಯಾಗಿ ಭರತ್, ಸಹ ಚುನಾವಣಾಧಿಕಾರಿಯಾಗಿ ಲಕ್ಷ್ಮೀನಾರಾಯಣ್ ಕಾರ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net