ಅಪಾಯ ಆಹ್ವಾನಿಸುತ್ತಿರುವ ಬೃಹತ್ ಮರ :ತೆರವಿಗೆ ಸ್ಥಳೀಯರ ಮನವಿ ; ಬೀದಿದೀಪ ಅಳವಡಿಕೆಗೆ ಆಗ್ರಹ

Big tree
ಅಪಾಯದ ಸ್ಥಿತಿಯಲ್ಲಿರುವ ಬೃಹತ್ ಹಳೇ ಮರ
Published on

ಕೊಕ್ಕರ್ಣೆ: ಶಿರಿಯಾರ ಗ್ರಾಪಂ ವ್ಯಾಪ್ತಿಯ ಕಳ್ಳಾಡಿ ಕುದ್ರೆಕಟ್ಟು ಐದು ಸೆಂಟ್ಸ್ ಕಾಲನಿ ಮುಖ್ಯರಸ್ತೆ ಪಕ್ಕದಲ್ಲಿ ಬೃಹತ್ ಮಾವಿನ ಮರ ಅಪಾಯಕಾರಿ ಸ್ಥಿತಿಯಲ್ಲಿದ್ದು, ಅಪಾಯ ಆಹ್ವಾನಿಸುತ್ತಿದೆ. ಈ ರಸ್ತೆ ಅವಲಂಬಿಸಿ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಿದ್ದು ಮರ ಬಿದ್ದರೆ ವಿದ್ಯುತ್ ಕಂಬ ಹಾಣಿಯಾಗಿ ದೊಡ್ಡ ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಸೂಕ್ತ ಬೀದಿ ದೀಪದ ವ್ಯವಸ್ಥೆ ಇಲ್ಲದೆ ರಾತ್ರಿ ಹೆಬ್ಬಾವು, ವಿಷ ಜಂತುಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ, ಸ್ಥಳಿಯರಲ್ಲಿ ಭೀತಿ ಹುಟ್ಟಿಸಿದೆ. ಸಬಂಧಪಟ್ಟ ಇಲಾಖೆ, ಅಧಿಕಾರಿಗಳು, ಪಂಚಾಯಿತಿ ಶೀಘ್ರದಲ್ಲಿ ಮರ ತೆರವುಗೊಳಿಸಿ ಬೀದಿ ದೀಪ ಅಳವಡಿಸಬೇಕೆಂದು ಗ್ರಾಮಸ್ಥರು ಈ ಮೂಲಕ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net