29 ರಂದು ಬೃಹತ್ ತಿರಂಗಾ ಯಾತ್ರೆ

indi kasugwoda
ಕಾಸುಗೌಡ ಬಿರಾದಾರ
Published on

ಇಂಡಿ: ಪಟ್ಟಣದಲ್ಲಿ ಮೇ 29 ರಂದು ಬೆಳಗ್ಗೆ 10.30 ಗಂಟೆಗೆ ಬೃಹತ್ ತಿರಂಗಾ ಯಾತ್ರೆ ನಡೆಯಲಿದೆ ಎಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ತಿಳಿಸಿದ್ದಾರೆ.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಸಮಸ್ತ ಪೂಜ್ಯರ ಸಾನ್ನಿಧ್ಯ ಹಾಗೂ ಮಾಜಿ ಸೈನಿಕರ ಅಧ್ಯಕ್ಷತೆಯಲ್ಲಿ ಪಕ್ಷಾತೀತ ಮತ್ತು ಜಾತ್ಯತೀತವಾಗಿ ತಿರಂಗಾ ಯಾತ್ರೆ ನಡೆಯಲಿದೆ.

ಸಂಸದರು, ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ವಕೀಲರು, ಅಭಿಯಂತರರು, ವೈದ್ಯರು, ವ್ಯಾಪಾರಸ್ಥರು, ಎಲ್ಲ ಸಂಘ ಸಂಸ್ಥೆಯವರು ಶಿಕ್ಷಣ ಸಂಸ್ಥೆಯವರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಉದ್ದಿಮೆದಾರರು, ರೈತರು ಮಹಿಳೆಯರು, ಗಣ್ಯರು, ವಿವಿಧ ಸಂಘಟನೆಯವರು ಸೇರಿ ಸಮಸ್ತ ದೇಶಭಕ್ತರು ಈ ಬೃಹತ್ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಪಟ್ಟಣದ ಶಿವಾಜಿ ವೃತ್ತದಿಂದ ಯಾತ್ರೆ ಆರಂಭಗೊಂಡು ಬಸವೇಶ್ವರ ವೃತ್ತವರೆಗೆ ಪಾದಯಾತ್ರೆಯಲ್ಲಿ ತೆರಳಿ ಅಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net