ಗಾರ್ನಿಯರ್ ಉಚಿತ ಹೇರ್ ಕಲರಿಂಗ್‌ಗೆ ಭರ್ಜರಿ ರೆಸ್ಪಾನ್ಸ್

HUN-JUNE-14-1(GARNIER COLOURING)
ಹುಣಸೂರು ನಗರದ ರೋಟರಿ ಭವನದಲ್ಲಿ ಆಯೋಜನೆಗೊಂಡಿರುವ ಗಾರ್ನಿಯರ್ ಉಚಿತ ಹೇರ್ ಕಲರಿಂಗ್ ಅಭಿಯಾನದಲ್ಲಿ ಮಹಿಳೆಯರು ತರಹೇವಾರಿ ಕಲರಿಂಗ್ ಮಾಡಿಸಿಕೊಂಡು ಸಂಭ್ರಮಿಸಿದರು.
Published on

ಹುಣಸೂರು: ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮತ್ತು ಗಾರ್ನಿಯರ್ ಕಂಪನಿ ಸಹಯೋಗದಲ್ಲಿ ಇಲ್ಲಿನ ರೋಟರಿ ಭವನದಲ್ಲಿ ಆಯೋಜಿಸಿರುವ ಗಾರ್ನಿಯರ್ ಉಚಿತ ಹೇರ್ ಕಲರಿಂಗ್ ಅಭಿಯಾನದ ಎರಡನೇ ದಿನವಾದ ಶುಕ್ರವಾರ 150ಕ್ಕೂ ಹೆಚ್ಚು ಜನರು ಕಲರಿಂಗ್ ಮಾಡಿಸಿಕೊಂಡು ಸಂಭ್ರಮಿಸಿದರು.

ಬಹುತೇಕ ಮಹಿಳೆಯರು ಮತ್ತು ಪುರುಷರು ಕಡುಕಪ್ಪು, ಕೆಂಪು, ಬರ್ಗಂಡಿ ಸೇರಿದಂತೆ ಬ್ಯೂಟಿಷಿಯನ್‌ರ ಸಲಹೆಯೊಂದಿಗೆ ತಲೆಗೂದಲುಗಳನ್ನು ಸುಂದರವಾಗಿಸಿಕೊಂಡರು.

ಹುಣಸೂರು ರೋಟರಿ ಇನ್ನರ್ ವ್ಹೀಲ್ ಅಧ್ಯಕ್ಷೆ ಸ್ಮಿತಾ ದಯಾನಂದ್ ಮಾತನಾಡಿ, ಮಹಿಳೆಯರು ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಹಲವಾರು ರೀತಿಯ ಕ್ರಮ ಅನುಸರಿಸುತ್ತಾರೆ. ವಿಜಯವಾಣಿ ಗಾರ್ನಿಯರ್ ಕಂಪನಿ ಸಹಯೋಗದಲ್ಲಿ ಉಚಿತ ಕಲರಿಂಗ್ ಮಾಡಿಕೊಡುವ ಮೂಲಕ ಮಹಿಳೆಯರಿಗೆ ಸೌಂದರ್ಯ ನಿರ್ವಹಣೆಗೆ ಇನ್ನಷ್ಟು ಪ್ರೇರೇಪಣೆ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇಂದಿನ ಕಾರ್ಯಕ್ರಮ": ರೋಟರಿ ಭವನದಲ್ಲಿ ಆಯೋಜಿಸಿರುವ ಗಾರ್ನಿಯರ್ ಉಚಿತ ಹೇರ್ ಕಲರಿಂಗ್ ಅಭಿಯಾನ ಜೂ.15ಕ್ಕೆ ಅಂತ್ಯವಾಗಲಿದೆ. ನಗರದ ನಾಗರಿಕರು ಸೌಲಭ್ಯವನ್ನು ಪಡೆದುಕೊಳ್ಳಬಹುದು. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಲಾಗಿದ್ದು, ಅಭಿಯಾನ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net