ಭಾರಿ ಪ್ರಮಾಣದ ಮದ್ಯ, ಡ್ರಗ್ಸ್ ವಶ

Published on

ಮೈಸೂರು: ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಮಾ.16ರಿಂದ 26ರವರೆಗೆ ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ, ಫ್ಲೈಯಿಂಗ್ ಸ್ವ್ಕ್ಯಾಡ್, ಎಸ್‌ಎಸ್ಟಿ ತಂಡಗಳು ಕಾರ್ಯಾಚರಣೆ ನಡೆಸಿ ಅಂದಾಜು 7.94 ಕೋಟಿ ರೂ. ಮೌಲ್ಯದ ಒಟ್ಟು 34,0485 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾಧಿಕಾರಿಯಾದ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
23 ಲಕ್ಷ ರೂ. ನಗದು, ಡ್ರಗ್ಸ್ ವಶ: ಚುನಾವಣೆಯಲ್ಲಿ ಅಕ್ರಮ ತಡೆಯಲು ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 23,39,540 ರೂ.ಗಳನ್ನು ಮಾ.26ರವರೆಗೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೆ 77,850 ರೂ. ಮೌಲ್ಯದ 3.29 ಕೆ.ಜಿ. ಡ್ರಗ್ಸ್, 85 ಸಾವಿರ ರೂ. ಮೌಲ್ಯದ ಇತರ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net