ಕಬ್ಬಿನ ಗದ್ದೆಯಲ್ಲಿ ಬೃಹತ್ ಹೆಬ್ಬಾವು ಸೆರೆ

1 Dwd 11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ನಿಗದಿ ಗ್ರಾಮದ ರೈತ ಸಿದ್ದಬಸಪ್ಪ ಹಳಿಯಾಳ ಎಂಬುವರ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿದ್ದ ಬೃಹತ್ ಹೆಬ್ಬಾವನ್ನು ವೈಲ್ಡ್ಲೈಫ್ ವೆಲ್‌ಫೇರ್ ಸೊಸೈಟಿಯ ತಂಡ ಸೆರೆ ಹಿಡಿದು ಕಾಡಿಗೆ ಬಿಟ್ಟಿದೆ.
ರೈತ ಸಿದ್ದಬಸಪ್ಪ ಹಳಿಯಾಳ ಎಂಬುವರು ಅಂಬ್ಲಿಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಕಬ್ಬಿನ ಜಮೀನು ಹೊಂದಿದ್ದಾರೆ. ಜಮೀನಿನಲ್ಲಿ ಹೆಬ್ಬಾವು ಕಂಡ ರೈತ ಉರಗ ರಕ್ಷಕ ಯಲ್ಲಪ್ಪ ಜೋಡಳ್ಳಿ ಅವರಿಗೆ ಮಾಹಿತಿ ನೀಡಿದ್ದರು. ವಿನಾಯಕ ಜೋಡಳ್ಳಿ, ಯಲ್ಲಪ್ಪ ಜೋಡಳ್ಳಿ ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ. ವೈಲ್ಡ್ಲೈಫ್ ವೆಲ್‌ಫೇರ್ ಸೊಸೈಟಿಯ ಶೇಖರ, ಇತರರು ಕಾರ್ಯಾಚರಣೆಯಲ್ಲಿದ್ದರು.
6 ಅಡಿ ಉದ್ದದ ಅಂದಾಜು 4 ವರ್ಷದ ಹೆಣ್ಣು ಹೆಬ್ಬಾವು, ಸುಮಾರು 20ರಿಂದ 25 ಕೆಜಿ ತೂಕವಿದೆ. ಸೆರೆ ಹಿಡಿದ ಹೆಬ್ಬಾವನ್ನು ಅರಣ್ಯ ಇಲಾಖೆಗೆ ಒಪ್ಪಿಸಿದರು. ಅಽಕಾರಿಗಳ ಆದೇಶದಂತೆ ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net