

ಹುಮನಾಬಾದ್: ರಾಜಕೀಯ ದ್ವೇಷ ಹಾಗೂ ಕೇಂದ್ರ ಸರ್ಕಾರದ ಆದೇಶದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷಗ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಪಟ್ಟಣದಲ್ಲಿ ಭಾನುವಾರ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ ನಡೆಯಿತು.
ಶ್ರೀ ವೀರಭದ್ರೇಶ್ವರ ಮಂದಿರದಿಂದ ಬಸವೇಶ್ವರ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಚೌಕ್‌ವರೆಗೆ ಮಾಜಿ ಸಚಿವ ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ಜನಪರ ಆಡಳಿತ, ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತಿರುವ ಸಿಎಂ ನೇರವಾಗಿ ಯಾವುದೇ ಅಧಿಕಾರ ದುರ್ಬಳಕೆ ಮಾಡಿಕೊಳ್ಳದಿದ್ದರೂ ಖಾಸಗಿ ದೂರು ಆಧರಿಸಿ ಮುಡಾ ಸೈಟ್ ಹಂಚಿಕೆ ಪ್ರಕರಣದಲ್ಲಿ ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಚುನಾಯಿತ ಸರ್ಕಾರವನ್ನು ಅಭದ್ರಗೊಳಿಸುವ ಷಡ್ಯಂತ್ರ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಪ್ರಮುಖರಾದ ವೀರಣ್ಣ ಪಾಟೀಲ್, ಅಭಿಷೇಕ ಪಾಟೀಲ್, ಲಕ್ಷ್ಮಣರಾವ ಬುಳ್ಳಾ, ಮಲ್ಲಿಕಾರ್ಜುನ ಮಾಶೆಟ್ಟಿ, ರಮೇಶ ಡಾಕುಳಗಿ, ಭಾರತಬಾಯಿ ಶೇರಿಕಾರ, ಬಾಬು ಟೈಗರ್, ಶ್ರೀಮಂತ ಪಾಟೀಲ್, ರೇವಣಸಿದ್ದಪ್ಪ ಪಾಟೀಲ್, ಶಿವರಾಜ ಚೀನಕೇರಾ, ಮಹೇಶ ಅಗಡಿ, ವಾಹೇದ್ ಬೇಗ್, ಮಾಣಿಕ ವಾಡೇಕರ್, ಅಫ್ಸರ್‌ಮಿಯಾ, ಓಂಕಾರ ತುಂಬಾ, ಉಮೇಶ ಜಮಗಿ, ಶೋಭಾ ಪಾಟೀಲ್, ಅಶ್ವಿನಿ ಸದಲಾಪುರ, ಸುರೇಖಾ ರೆಡ್ಡಿ, ಸುಮಿತ್ರಾಬಾಯಿ ಪರೀಟ್, ಸತೀಶ ರಾಂಪುರೆ, ವಿಠ್ಠಲರಾವ, ಅಶೋಕ ಚಳಕಾಪುರೆ, ವಿಠ್ಠಲ್ ಬೇನಚಿಂಚೋಳಿ, ದಿಲೀಪ ಬಗದಲಕರ್, ಮುಜಾಫರ್ ಪಟೇಲ್, ಸಿದ್ದು ಪಾಟೀಲ್ ಸೇರಿ ಪುರಸಭೆ ಸದಸ್ಯರು, ಎನ್‌ಎಸ್‌ಯು, ಮಹಿಳಾ ಘಟಕದ ಪದಾಧಿಕಾರಿಗಳು, ಅಹಿಂದ, ದಲಿತಪರ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ರಾಷ್ಟಪತಿಗಳಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್‌ಗೆ ಸಲ್ಲಿಸಲಾಯಿತು.