ಬೃಹತ್ ಭಾವಚಿತ್ರ ಮೆರವಣಿಗೆ

30 KNK 03
ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ಬಸವ ಜಯಂತಿ ನಿಮಿತ್ತ ಬಸವಣ್ಣನವರ ಬೃಹತ್ ಭಾವಚಿತ್ರದ ಮೆರವಣಿಗೆ ಬುಧವಾರ ನಡೆಯಿತು.
Published on

ಕನಕಗಿರಿ: ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಬಸವ ಜಯಂತಿ ನಿಮಿತ್ತ ಬಸವೇಶ್ವರರ ಬೃಹತ್ ಭಾವಚಿತ್ರದ ಮೆರವಣಿಗೆ ಬುಧವಾರ ನಡೆಯಿತು. ಗ್ರಾಮದ ವೀರಶೈವ ಲಿಂಗಾಯತ ಯುವಕ ಸಂಘದ ಸಮುದಾಯ ಭವನದಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ, ಬಸವಣ್ಣ ವೃತ್ತದ ಮಾರ್ಗವಾಗಿ ಸ್ವ ಸ್ಥಾನ ತಲುಪಿತು.

ಗ್ರಾಮದ ನೂರಾರು ಮಹಿಳೆಯರು ಮತ್ತು ಯುವತಿಯರು ಕಳಶದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಡಿಜೆ ಸದ್ದಿಗೆ ಯುವಕರು ಕುಣಿದರು. ಜಯಂತಿ ನಿಮಿತ್ತ ಸಂಜೆ ಗ್ರಾಮಸ್ಥರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಭಾವಚಿತ್ರಕ್ಕೆ ಪೂಜೆ: ಜಯಂತಿ ನಿಮಿತ್ತ ಗ್ರಾಮದ ವೀರಶೈವ ಲಿಂಗಾಯತ ಯುವಕ ಸಂಘದ ಸಭಾ ಭವನದಲ್ಲಿ ಬೆಳಗ್ಗೆ ಬಸವಣ್ಣ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮುಸಲಾಪುರದ ಶ್ರೀಧರಸ್ವಾಮಿ ಪೂಜೆ ನೆರವೇರಿಸಿದರು. ವೀರೇಶ ಹಿರೇಮಠ, ಸಂಘದ ಅಧ್ಯಕ್ಷ ಬಸಣ್ಣ ಗದ್ದಿ, ಮುಖಂಡರಾದ ಶಿವಪ್ಪ ಗದ್ದಿ, ಗೋಸಲಪ್ಪ ಗದ್ದಿ, ಗ್ರಾಪಂ ಉಪಾಧ್ಯಕ್ಷ ಜಗದೀಶ ಗದ್ದಿ, ಮಂಜುನಾಥ ಯಂಕಪ್ಪ ಗದ್ದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net