ಬಿತ್ತನೆ ಬೀಜಗಳ ದರದಲ್ಲಿ ಭಾರಿ ಇಳಿಕೆ

28yaragatt1
filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 5970; AI_Scene: (-1, -1); aec_lux: 112.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 34;
Published on

ಯರಗಟ್ಟಿ: ಈ ಬಾರಿ ರಾಜ್ಯ ಸರ್ಕಾರ ಬಿತ್ತನೆ ಬೀಜಗಳ ದರದಲ್ಲಿ ಭಾರಿ ಇಳಿಕೆ ಮಾಡಿದ್ದು, ರೆತರಲ್ಲಿ ಹರ್ಷ ಮೂಡಿಸಿದೆ. ಮಳೆರಾಯನು ಸಾಥ್​ ನೀಡಿದ್ದಾನೆ ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.

ಇಲ್ಲಿನ ಎಪಿಎಂಸಿ ಆವರಣದಲ್ಲಿ ಕಷಿ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ರೆತರು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆದು ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಬೇಕು ಎಂದರು.

ತಾಲೂಕು ಕೃಷಿ ಸಹಾಯಕ ನಿರ್ದೇಶಕ ಶಿವಪ್ರಕಾಶ ಪಾಟೀಲ ಮಾತನಾಡಿ, 5 ಕೆಜಿ ಹೆಸರಿಗೆ 805 ರೂ. ಇದ್ದ ದರ ಈಗ 575 ರೂ. ಹಾಗೂ 5 ಕೆಜಿ ಉದ್ದಿಗೆ 760 ರೂ. ಇದ್ದ ದರ ಈಗ 567 ರೂ. ಆಗಿದೆ. ಜತಗೆ ಯಾವುದೇ ಕಾರಣಕ್ಕೂ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆ ಆಗುವುದಿಲ್ಲ. ಈಗಾಗಲೇ ಹೆಸರು, ಗೋವಿನ ಜೋಳ, ಉದ್ದ, ಸಜ್ಜೆಯ ಬಿತ್ತನೆ ಬೀಜ ವಿತರಿಸಲಾಗುತ್ತಿದ್ದು, ಯರಗಟ್ಟಿ ಎಪಿಎಂಸಿ ಗೋದಾಮಿನಲ್ಲಿ ಪಡೆದುಕೊಳ್ಳಬಹುದು ಎಂದರು.

ತಹಸೀಲ್ದಾರ್​ ಎಂ.ವಿ. ಗುಂಡಪ್ಪಗೋಳ, ಜಿಲ್ಲಾ ಕೃಷಿ ಅಧಿಕಾರಿ ಸಲೀಂ ಸಂಗತ್ರಾಸ, ಎಪಿಎಂಸಿ ಅಧ್ಯ ನೀಲಕಂಠ ಸಿದ್ದಬಸನ್ನವರ, ಪ್ರಕಾಶ ವಾಲಿ, ನಿಖಿಲ ಪಾಟೀಲ, ಸಲೀಂ ಜಮಾದಾರ, ಶಿವಾನಂದ ಕರಿಗನ್ನವರ, ಬಸವರಾಜ ಚನ್ನಮೇತ್ರಿ, ಮಹಾಂತೇಶ ಉಪ್ಪಿನ, ಸಿಂಧೂರ ತೆಗ್ಗಿ, ಎ್​.ಟಿ. ಪಟಾತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net