ಭಾರಿ ಗಾಳಿ ಮಳೆಗೆ ಕಾರ್ಕಳದಲ್ಲಿ ಅಪಾರ ಹಾನಿ

male hani
ಕೆರ್ವಾಶೆ ಗ್ರಾಮದ ಪ್ರಮೀಳಾ ಎಂಬುವರ ಮನೆಗೆ ಹಾನಿಯಾಗಿರುವುದು.
Published on

ಕಾರ್ಕಳ: ತಾಲೂಕಾದ್ಯಂತ ಸುರಿದ ಭಾರಿ ಗಾಳಿ ಮಳೆಗೆ ನೀರೆ ಗ್ರಾಮದ ರಘುಪತಿ ಶೆಟ್ಟಿಗಾರ್, ಅಯ್ಯಪ್ಪ ನಗರ ರುಕ್ಕಯ್ಯ, ಕೌಡೂರು ಗ್ರಾಮದ ನಾಯರ್‌ಬೆಟ್ಟು ನಿವಾಸಿ ಜಯಂತಿ ಮನೆ ಹೆಂಚು ಗಾಳಿಗೆ ಹಾರಿ ನಷ್ಟ ಉಂಟಾಗಿದೆ. ನಿಟ್ಟೆ ಗ್ರಾಮದ ಮದನಾಡು ನಿವಾಸಿ ಪ್ರಮೀಳಾ, ಕಣಜಾರು ಗ್ರಾಮದ ಸದಾನಂದ ಮೂಲ್ಯರವರ ಮನೆಗೆ ಮರ ಬಿದ್ದು ಹಾನಿಯಾಗಿದೆ.

ಕೆರ್ವಾಶೆ ಗ್ರಾಮದ ಪ್ರಮೀಳಾ ಮನೆಯ ಶೀಟ್ ಹಾಗೂ ಹೆಂಚು ಹಾರಿದೆ. ಬೆಳ್ಮಣ್ ಗ್ರಾಮದ ಚರ್ಚ್ ಬಳಿ ನಿವಾಸಿ ಜಾರ್ಜ್ ಡಿಸೋಜರ ಅಡಕೆ ತೋಟಕ್ಕೆ ಮರ ಬಿದ್ದಿದೆ. ಮಾಳ ಗ್ರಾಮದ ಮಂಜಲ್ತಾರ್ ನಿವಾಸಿ ವನಜಾ ಪೂಜಾರಿ, ಬೋಳ ಗ್ರಾಮದ ಪರ್ತಿಮಾರು ಮೀನಾ ಪೂಜಾರಿ ಮನೆ ಮೇಲ್ಛಾವಣಿಗೆ ಅಡಕೆ ಮರ ಬಿದ್ದು ಹಾನಿಯಾಗಿದೆ. ಕುಕ್ಕುಂದೂರು ಗ್ರಾಮದ ಭವಾನಿ ಮನೆ, ದುರ್ಗನಗರದ ಮಂಜುಳಾ ಎಂಬುವರ ನಿರ್ಮಾಣ ಹಂತದ ಮನೆಗೆ ಹಾನಿಯಾಗಿದೆ. ನಿಟ್ಟೆ ಗ್ರಾಮದ ಮದನಾಡು ಪ್ರಮೀಳಾ ಮನೆಗೆ ಮರ ಬಿದ್ದಿದೆ. ಕುಕ್ಕುಂದೂರು ಗ್ರಾಮದ ನಕ್ರೆಯ ವಿನ್ನಿ ಡಿಸೋಜರ ಗದ್ದೆಗೆ ತೋಡಿನ ನೀರು ಹರಿದು ಭತ್ತದ ಬೇಳೆ ಹಾನಿಯಾಗಿದೆ. ಕಣಜಾರು ಗ್ರಾಮದ ಲಕ್ಷ್ಮಣ ನಾಯಕ್, ಕಣಜಾರು ಗ್ರಾಮದ ಶೇಖರ್ ಪೂಜಾರಿಯವರ ತೋಟಕ್ಕೆ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net