ಸಂಸ್ಥೆಯಿಂದ ಅಭಿವೃದ್ಧಿಗೆ ಅಪಾರ ಕೊಡುಗೆ

ಗುರುಗುಂಟಾದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವಲಯ ಕಮಲ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದೇವದುರ್ಗ ತಾಲೂಕು ಯೋಜನಾಧಿಕಾರಿ ವೇಣುಗೋಪಾಲ ಉದ್ಘಾಟಿಸಿದರು. ಕರ್ನಾಟಕ ಆರ್ಯ ವೈಶ್ಯ ಯುವಜನ ಮಹಾಸಭಾ ರಾಜ್ಯ ಉಪಾಧ್ಯಕ್ಷ ಆನಂದ ತುರ್ವಿಹಾಳ, ಮೇಲ್ವಿಚಾರಕ ಅಮಿತ್ ಮುಚಕಂಡಿ, ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಅಕ್ಕನಗೌಡರ ಇತರರಿದ್ದರು.

Published on

ಗುರುಗುಂಟಾ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸರ್ಕಾರಿ ಶಾಲೆಗಳಿಗೆ 1,000 ಶಿಕ್ಷಕರನ್ನು ನೇಮಿಸಿ ಅವರಿಗೆ 8.10 ಕೋಟಿ ರೂ ವೇತನ ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಲಾಗಿದೆ ಎಂದು ದೇವದುರ್ಗ ತಾಲೂಕು ಯೋಜನಾಧಿಕಾರಿ ವೇಣುಗೋಪಾಲ ಹೇಳಿದರು.

ಇಲ್ಲಿನ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗುರುಗುಂಟಾ ವಲಯ ಕಮಲ ಜ್ಞಾನವಿಕಾಸ ಕೇಂದ್ರದ 3ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡುವ ಜತೆಗೆ ಆರೋಗ್ಯ, ಸಾಮಾಜಿಕ, ಧಾರ್ಮಿಕ, ಕೃಷಿ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ, ಶೌಚಗೃಹ ನಿರ್ಮಿಸಲಾಗಿದೆ. ಕುಡಿಯುವ ನೀರಿನ ಕೆರೆಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಸೌರ ಘಟಕಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ 6.5 ಲಕ್ಷ ಸ್ವಸಹಾಯ ಸಂಘಗಳಲ್ಲಿ 53 ಲಕ್ಷ ಸದಸ್ಯರಿದ್ದಾರೆ. ಆರ್ಥಿಕ ಅಶಕ್ತ ಕುಟುಂಬಗಳಿಗೆ ತಿಂಗಳಿಗೆ 3,000ರೂ.ದಂತೆ 20 ಸಾವಿರ ಜನರಿಗೆ ಮಾಸಾಶನ ನೀಡಲಾಗುತ್ತಿದೆ. 1.30ಲಕ್ಷ ಜನ ಮದ್ಯವ್ಯಸನ ಮುಕ್ತರಾಗಿದ್ದಾರೆ. ಸುಜ್ಞಾನ ನಿಧಿ ಯೋಜನೆಯಡಿ 95 ಸಾವಿರ ಮಕ್ಕಳಿಗೆ ಶಿಷ್ಯವೇತನ ನೀಡಲಾಗಿದೆ. ಜಲಮಂಗಲ ಯೋಜನೆಯಡಿ ವಿಕಲಚೇತನರಿಗೆ ಸಲಕರಣೆ, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.

ಗ್ರಾಪಂ ಸದಸ್ಯ ಆರ್.ಶರಣಬಸವ, ವೇದಮೂರ್ತಿ ರಾಚಯ್ಯಸ್ವಾಮಿ, ಜ್ಞಾನ ವಿಕಾಸ ತಾಲೂಕು ಸಮನ್ವಯಾಧಿಕಾರಿ ಅಶ್ವಿನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net