

ದೇವದುರ್ಗ: ತಾಲೂಕಿನ ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕರಾಯಕುಂಪಿ ಕೃಷ್ಣಾ ನದಿದಂಡೆ ಸಮೀಪ ಮರಳು ಅನಧಿಕೃತವಾಗಿ ಸಂಗ್ರಹಿಸಿದ್ದ ಅಡ್ಡೆ ಮೇಲೆ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ನೇತೃತ್ವದಲ್ಲಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ಕೃಷ್ಣಾನದಿಯಿಂದ ಅನಧಿಕೃತವಾಗಿ ಮರಳು ತೆಗೆದು ಸರ್ವೇ ನಂಬರ್ 9ರಲ್ಲಿ ಸಂಗ್ರಹಿಸಲಾಗಿತ್ತು. ದಾಳಿ ವೇಳೆ ಸುಮಾರು 6.76ಲಕ್ಷ ರೂ. ಮೌಲ್ಯದ 1083 ಮೆಟ್ರಿಕ್ ಮರಳು ಜಪ್ತಿ ಮಾಡಲಾಗಿದೆ.
ಮೂರು ಟ್ರ್ಯಾಕ್ಟರ್ ವಶಕ್ಕೆ ಪಡೆಯಲಾಗಿದೆ. ಜಮೀನು ಮಾಲೀಕ ಚಂದ್ರಾಮ ಹನುಮಯ್ಯ ಎನ್ನುವವರ ವಿರುದ್ಧ ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ಗಣಿ ಮತ್ತು ಭೂ ಇಲಾಖೆ ಅಧಿಕಾರಿ ಡಿ.ಮಹೇಶ, ಸಿಪಿಐ ಗುಂಡೂರಾವ್, ಪಿಎಸ್‌ಐ ಗಂಗಪ್ಪ ಬುರ್ಲಿ ಇದ್ದರು.