ನಿಗಮ ರಚನೆಗೆ ಹೂಗಾರ ಸಮುದಾಯ ಹರ್ಷ

2102-Kpl-Ravi-4
Published on

ಕೊಪ್ಪಳ: ರಾಜ್ಯ ಸರ್ಕಾರ ಮಾಲಿ, ಮಾಲಗಾರ ಹಾಗೂ ಹೂಗಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶಿದ್ದಕ್ಕೆ ಜಿಲ್ಲಾ ಹೂಗಾರ ಸಮುದಾಯ ಮುಖಂಡರು ಮಂಗಳವಾರ ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.


ಹೂವಾಡಿಗ, ಹೂಗಾರ್, ಹೂಗಾರ, ಮಾಲಗಾರ್, ಮಾಲಿ, ಫಲ್‌ಮಾಲಿ, ಫುಲ್‌ಮಾಲಿ, ಫುಲಾರಿ, ಪೂಲಾರಿ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮ ರಚಿಸಿರುವುದಾಗಿ ಸರ್ಕಾರ ತಿಳಿಸಿದ್ದು, ಸಿಎಂ ನಿರ್ದೇಶದ ಮೇರೆಗೆ ನಿಗಮ ರಚಿಸಿರುವುದಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಷಾಹಿನ್ ಪರ್ವಿನ್ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಹೊಸ ಬಸ್ ನಿಲ್ದಾಣ, ಅಶೋಕ ವೃತ್ತ, ಗಡಿಯಾರ ಕಂಬ ವೃತ್ತ, ಬಸವೇಶ್ವರ ವೃತ್ತದಲ್ಲಿನ ಹೂಗಾರರು ಅಲ್ಲಲ್ಲೇ ಸಂಭ್ರಮ ಆಚರಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಜೈಕಾರ ಹಾಕಿದರು.

ಸಮುದಾಯ ಮುಖಂಡರಾದ ಗವಿಸಿದ್ದಪ್ಪ ಹೂಗಾರ, ವೆಂಕಣ್ಣ ಹೂಗಾರ, ವಿರೂಪಾಕ್ಷಪ್ಪ ಹೂಗಾರ, ಮಂಜುನಾಥ ಹೂಗಾರ, ವೀರೇಶ್ ಹೂಗಾರ, ತೇಜಪ್ಪ ಹೂಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net