ಹುಬ್ಬಳ್ಳಿ: ಇಲ್ಲಿಯ ಹೂಗಾರ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಧಾರವಾಡ ಜಿಲ್ಲಾ ವ್ಯಾಪ್ತಿಯ ಹೂಗಾರ ಸಮಾಜದ ಪ್ರತಿಭಾವಂತರಿಗೆ ಪುರಸ್ಕಾರ ನೀಡಲಾಗುತ್ತಿದ್ದು, ಅಜಿರ್ ಸಲ್ಲಿಸುವಂತೆ ಸಹಕಾರಿ ಅಧ್ಯಕ್ಷ ಲೋಚನೇಶ ಹೂಗಾರ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೋಮಾ, ಐಟಿಐ ಹಾಗೂ ಯಾವುದೇ ಪದವಿ ಪರೀೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾಥಿರ್ಗಳು ಆಗಸ್ಟ್ 31ರೊಳಗೆ ಅಜಿರ್ ಸಲ್ಲಿಸಬಹುದು. ಎಂಬಿಬಿಎಸ್, ಬಿಇ ಓದುತ್ತಿರುವ ಸಮಾಜದ ವಿದ್ಯಾಥಿರ್ಗಳಿಗೆ ಆಥಿರ್ಕ ನೆರವು ನೀಡಲಾಗುವುದು ಎಂದರು.
ಸೆಪ್ಟೆಂಬರ್ 10ರಂದು ಬೆಳಗ್ಗೆ 11ಕ್ಕೆ ನಗರದ ನೌಕರರ ಭವನದಲ್ಲಿ ಸಹಕಾರಿಯ 9ನೇ ವಾಷಿರ್ಕ ಸಭೆ ನಡೆಯಲಿದ್ದು, ಅಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
2014ರಲ್ಲಿ ಆರಂಭವಾದ ಸಹಕಾರಿ ಸಂವು ಶ್ರೀ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ಇದುವರೆಗೂ ಯಾವುದೇ ಸಮಸ್ಯೆ ಇಲ್ಲದಂತೆ ಸಂಸ್ಥೆ ನಡೆದುಕೊಂಡು ಬಂದಿದೆ. ಲಾಭದಲ್ಲಿದ್ದು, ಸದಸ್ಯರಿಗೆ ಡಿವಿಡೆಂಡ್ ನೀಡುತ್ತ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಸಹಕಾರಿ ಉಪಾಧ್ಯಕ್ಷ ಸುರೇಶ ಹೂಗಾರ, ನಿರ್ದೇಶಕರಾದ ಸರೋಜಾ ಹೂಗಾರ, ಬಸವರಾಜ ಹೂಗಾರ, ದೇವೇಂದ್ರ, ರಮೇಶ ಗೋಷ್ಠಿಯಲ್ಲಿದ್ದರು.