ಸಂಸ್ಕಾರಯುತ ಶಿಕ್ಷಣವೇ ಮಕ್ಕಳ ಆಸ್ತಿ

Published on

ಅಕ್ಕಲಕೋಟ: ಹೂಗಾರ ಸಮಾಜದವರು ಮಕ್ಕಳಿಗೆ ಉತ್ತಮ ಸಂಸ್ಕಾರಯುಕ್ತ ಶಿಕ್ಷಣ ನೀಡಿ, ಅವರನ್ನೇ ಆಸ್ತಿಯನ್ನಾಗಿ ಮಾಡಿರಿ ಎಂದು ಸಂಸದ ಶ್ರೀ ಡಾ.ಜಯಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ಸಿ.ಬಿ.ಖೇಡಗಿ ಇಂಟರ್‌ನ್ಯಾಷನಲ್ ಶಾಲೆ ಸಭಾಂಗಣದಲ್ಲಿ ಹೂಗಾರ ಸಮಾಜ ಮಂಗಳವಾರ ಹಮ್ಮಿಕೊಂಡ ೧೦ನೇ ಹಾಗೂ ೧೨ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ವಿದ್ಯೆಗೆ ಸಮಾಜದಲ್ಲಿ ಒಳ್ಳೆ ಸ್ಥಾನ ಇದ್ದು, ಜ್ಞಾನಿಗಳಾಗಿ ಹೂಗಾರ ಸಮಾಜ ಸಂಘಟನೆ ಮಾಡಬೇಕು ಎಂದರು.
ಅನೀಲ ಮಂಗರುಳೆ ಮಾತನಾಡಿ, ಹೂಗಾರ ಸಮಾಜವೂ ನಾಡಿಗೆ ಅಮೋಘ ಕೊಡುಗೆ ನೀಡಿದ್ದು, ಇತ್ತೀಚೆಗೆ ಖಾಸಗಿ ವಾಹಿನಿಯ ಖ್ಯಾತ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ ದಿವ್ಯಾಂಗ ಬಾಲಕ ರೇವಣಸಿದ್ದ ಫುಲಾರಿ ಅವರಂಥ ಪ್ರತಿಭೆಗಳು ದೊರೆತ್ತದ್ದು ಹೆಮ್ಮೆಯ ವಿಷಯ ಎಂದರು.
ಸಾಧಕರಿಗೆ ಸನ್ಮಾನ, ಸಂಗೀತ ರಸದೌತಣ: ಕಾರ್ಯಕ್ರಮದಲ್ಲಿ ಸರಿಗಮಪ ಖ್ಯಾತಿಯ ಗಾಯಕ ರೇವಣಸಿದ್ಧ ಫುಲಾರಿ ಸಂಗೀತ ರಸದೌತಣ ಕೇಳುಗರನ್ನು ಭಾವಪರವಶಃ ಮಾಡಿತು. ಸಾಧಕರಾದ ಬಸವರಾಜ ತೇಲಗಾಂವ, ರೇವಣಸಿದ್ದ ಫುಲಾರಿ, ರಾಜಕುಮಾರ ಬಿರಾಜದಾರ, ಚಂದ್ರಕಾAತ ಗುರವ, ಪ್ರಭಾಕರ ಗುರವ, ಬಾಬುರಾವ ಫುಲಾರಿ, ಚಂದ್ರಕಾAತ ಗುರವ, ಚಂದ್ರಕಾAತ ಫುಲಾರಿ ಸೇರಿ ಇತರ ಸಾಧಕರನ್ನು, ೧೦, ೧೨ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಪಡೆದ ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾಶೀನಾಥ ಗುರವ ಮಹಾರಾಜ, ಮಾಜಿ ನಗರಾಧ್ಯಕ್ಷ ಶೋಭಾ ಖೇಡಗಿ, ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ ಮೋಕಾಶೆ, ಹಿರಿಯ ವಿಧಿಜ್ಞ ಅನೀಲ ಮಂಗರುಳೆ, ಉದ್ಯೋಗಪತಿ ಸಂಜಯ ಪಾಟೀಲ್, ಜಿಲ್ಲಾಧ್ಯಕ್ಷ ಸಂಜಯ ಘುಗೆ, ತಾಲೂಕಾಧ್ಯಕ್ಷ ಶಿವಾನಂದ ಫುಲಾರಿ, ಕಾರ್ಯದರ್ಶಿ ಮಲ್ಲಿನಾಥ ಪೂಜಾರಿ, ಪ್ರಮುಖರಾದ ರಮೇಶ ಫುಲಾರಿ, ಶಿವಾನಂದ ಪೂಜಾರಿ, ದೀಪಕ ಗುರವ, ಕಾಶೀನಾಥ ಫುಲಾರಿ, ಬಸವರಾಜ ಫುಲಾರಿ, ಸಚಿನ ಫುಲಾರಿ, ಇತರರಿದ್ದರು. ಮಲ್ಲಿನಾಥ ಪೂಜಾರಿ ಸ್ವಾಗತಿಸಿದರು. ವಿದ್ಯಾಧರ ಗುರವ ನಿರೂಪಣೆ ಮಾಡಿದರು. ಶರಣಪ್ಪ ಫುಲಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net