ಹುದುಗೂರಿನಲ್ಲಿ ನವರಾತ್ರಿ ಸಂಭ್ರಮ

huduguru
Published on

ಮಡಿಕೇರಿ:

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ನವರಾತ್ರಿಯ ಅಂಗವಾಗಿ ಶನಿವಾರ ಶ್ರಧ್ಧಾಭಕ್ತಿಯಿಂದ ಗಣಪತಿ ಹೋಮ, ಮೃತ್ಯುಂಜಯ ಹೋಮ, ಚಂಡಿಕಾಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳ ಜತೆಗೆ ಲಲಿತಾ ಸಹಸ್ರನಾಮ ಪಾರಾಯಣದೊಂದಿಗೆ ಕುಂಕುಮಾರ್ಚನೆ ನಡೆದವು.

ಪೂಜೋತ್ಸವ ಕಾರ್ಯಕ್ರಮದಲ್ಲಿ ಕೂಡಿಗೆ, ಕೂಡುಮಂಗಳೂರು, ಹಾರಂಗಿ, ಕೂಡಿಗೆ, ಮದಲಾಪುರ, ಯಡವನಾಡು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು. ಪೂಜಾ ಕೈಂಕರ್ಯಗಳನ್ನು ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಉಮಾಮಹೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ, ಉಪಾಧ್ಯಕ್ಷ ಎನ್. ಎಸ್. ಮುತ್ತಪ್ಪ, ಕಾರ್ಯದರ್ಶಿ ಸುರೇಶ್, ಸಹ ಕಾರ್ಯದರ್ಶಿ ಹೆಚ್. ಸಿ. ಮೋಹನ್ ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net