ಹುಚ್ಚಿರೇಶ್ವರ ಜ್ಯೋತಿ ರಥಯಾತ್ರೆಗೆ ಚಾಲನೆ

NRGL CHALANE
Published on

ನರೇಗಲ್ಲ: ಪಟ್ಟಣದಲ್ಲಿ ಫೆ. 5, 6 ಮತ್ತು 7 ರಂದು ಹಠಯೋಗಿ ಹುಚ್ಚಿರಪ್ಪಜ್ಜನ ಪುಣ್ಯಾರಾಧನೆ ಶತಮಾನೋತ್ಸವದ ನಿಮಿತ್ತ ಶ್ರೀ ಮಠದಲ್ಲಿ ಹುಚ್ಚಿರಪ್ಪಜ್ಜನ ಜ್ಯೋತಿ ರಥಯಾತ್ರೆಗೆ ಭಾನುವಾರ ಚಾಲನೆ ನೀಡಲಾಯಿತು.

ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಎಂ.ಸಿ. ಚಪ್ಪನ್ನಮಠ ರಥಯಾತ್ರೆಗೆ ಚಾಲನೆ ನೀಡಿದರು. ಶತಮಾನೋತ್ಸವದ ನೆನಪಿಗಾಗಿ ನಿವೃತ್ತ ಮುಖ್ಯಶಿಕ್ಷಕ ಅರುಣ ಕುಲಕರ್ಣಿ ತಮ್ಮ ಮನೆಯಲ್ಲಿ ಬೆಳೆದಿದ್ದ ಆಲದ ಸಸಿಯನ್ನು ಶ್ರೀಮಠಕ್ಕೆ ಕಾಣಿಕೆಯಾಗಿ ನೀಡಿದ್ದು, ಅದನ್ನು ಶ್ರೀಮಠದ ಆವರಣದಲ್ಲಿ ನೆಡಲಾಯಿತು.

ಪಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಶಿವನಗೌಡ ಪಾಟೀಲ, ಡಾ. ಎಲ್.ಎಸ್. ಗೌರಿ, ಸುನೀಲ ಬಸವರಡ್ಡೇರ, ಮುತ್ತಪ್ಪ ನೂಲ್ಕಿ, ಶೇಖಪ್ಪ ಜುಟ್ಲ, ಅಮೃತಯ್ಯ ಅಣ್ಣಿಗೇರಿಮಠ, ಶೇಖಪ್ಪ ಕೆಂಗಾರ, ಈರಪ್ಪ ಜೋಗಿ, ಪಿ.ಬಿ. ನಾಡಗೌಡ್ರ, ಮೈಲಾರಪ್ಪ ಚಳ್ಳಮರದ, ಅಲ್ಲಾಭಕ್ಷ ನದಾಫ್, ಬಾಳಪ್ಪ ಕಳಕಣ್ಣವರ, ಎಂ.ಎಸ್. ಮಲ್ಲನಗೌಡ್ರ, ಕೃಷ್ಣ ಜುಟ್ಲ, ಬಸವರಾಜ, ಉಮೇಶ ಅರಹುಣಶಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net