ಅಂಗನವಾಡಿ ಮಕ್ಕಳಿಂದ ಸಂತೆ ಕಾರ್ಯಕ್ರಮ

24 MYK
Published on

ಮಾಯಕೊಂಡ: ಹೋಬಳಿಯ ಹುಚ್ಚವ್ವನಹಳ್ಳಿ ಎಕೆ ಕಾಲನಿಯ ಅಂಗನವಾಡಿ ಆವರಣದಲ್ಲಿ ಶನಿವಾರ ಅಂಗನವಾಡಿ ಮಕ್ಕಳಿಂದ ಸಂತೆ ಕಾರ್ಯಕ್ರಮವನ್ನು ಆಯೋಜಿಸಿ ವಿವಿಧ ಬಗೆಯ ತರಕಾರಿ, ವಸ್ತುಗಳನ್ನು ಮಾರಾಟ ಮಾಡುವ ವಿಧಾನವನ್ನು ಹೇಳಿಕೊಡಲಾಯಿತು.

ಇಲ್ಲಿನ ಅಂಗನವಾಡಿ ಶಿಕ್ಷಕಿ ಸಾವಿತ್ರಿ ಅವರು ವಾರದಲ್ಲಿ ಇಂತಹ ಎರಡು- ಮೂರು ಪಠ್ಯೇತರ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಮಕ್ಕಳನ್ನು ಕ್ರಿಯಾಶೀಲರನ್ನಾಗಿ ಮಾಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗಳ ಪ್ಲೇ ಹೋಂ ಎಲ್​ಕೆಜಿಗಳಿಗೆ ದಾಖಲಿಸುವುದರಿಂದ ಆಟವಾಡುವ ವಯಸ್ಸಿನಲ್ಲಿ ಶಿಕ್ಷಣ ಕಲಿಕೆ ಎನ್ನುವ ಹೊರೆಯನ್ನು ಮಕ್ಕಳಿಗೆ ಮೇಲೆ ಹೇರುತ್ತಿದ್ದಾರೆ. ಆದರೆ ಸರ್ಕಾರಿ ಅಂಗನವಾಡಿಗಳು ಕಲಿಕೆಯೊಂದಿಗೆ ಮಕ್ಕಳಿಗೆ ವಿವಿಧ ಆಟೋಟ, ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಮಕ್ಕಳಿಗೆ ಮುದ ನೀಡುತ್ತಿದ್ದಾರೆ.

ಈ ವೇಳೆ ಶಿಕ್ಷಕಿ ಸಾವಿತ್ರಿ ಮಾತನಾಡಿ, ಅಂಗನವಾಡಿಯು ಕಾಲನಿಯ ಭಜನಾ ಮಂದಿರದಲ್ಲಿ ನಡೆಯುತ್ತಿದ್ದು ಸ್ವಂತ ಕಟ್ಟಡದ ಅವಶ್ಯಕತೆ ಇದೆ. ಗ್ರಾಪಂ ಕಾಲನಿಯಲ್ಲಿರುವ ಯಾವುದಾದರೂ ಖಾಲಿ ನಿವೇಶನದಲ್ಲಿ ಅಂಗನವಾಡಿ ಕಟ್ಟಡ ನಿರ್ವಿುಸಿ ಕೊಡಬೇಕು ಎಂದು ಮನವಿ ಮಾಡಿದರು.

ಗ್ರಾಪಂ ಎದುರಿಗೆ ಇರುವ ಹಾಲಿನ ಡೇರಿ ಪಕ್ಕ ಖಾಲಿ ನಿವೇಶನದಲ್ಲಿ ಅಂಗನವಾಡಿ ಕಟ್ಟಡಕ್ಕೆ ಸ್ಥಳ ನಿಗದಿಗೊಳಿಸಲಾಗಿದೆ. ಸ್ವಲ್ಪ ದಿನಗಳಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ವಣಗೊಳ್ಳಲಿದೆ ಎಂದು ಗ್ರಾಪಂನವರು ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net