ಕಾರ್ಯ ಗ್ರಾಪಂ ಸದಸ್ಯರಾಗಿ ಹುಚ್ಚಪ್ಪ ಅವಿರೋಧ ಆಯ್ಕೆ

ನಂಜನಗೂಡು ತಾಲೂಕು ಕಾರ್ಯ ಗ್ರಾಪಂ ಸದಸ್ಯರಾಗಿ ಹುಚ್ಚಪ್ಪ ಅವಿರೋಧವಾಗಿ ಆಯ್ಕೆಯಾದರು. ಬಸವಣ್ಣ, ದಿನೇಶ್, ಉಮೇಶ್, ಯೋಗೇಂದ್ರ, ಪ್ರಭುಸ್ವಾಮಿ, ರಮೇಶ್, ಕಾರಾಪುರ ಕುಮಾರ್, ಶಿವಸ್ವಾಮಿ ಇದ್ದರು
ನಂಜನಗೂಡು ತಾಲೂಕು ಕಾರ್ಯ ಗ್ರಾಪಂ ಸದಸ್ಯರಾಗಿ ಹುಚ್ಚಪ್ಪ ಅವಿರೋಧವಾಗಿ ಆಯ್ಕೆಯಾದರು. ಬಸವಣ್ಣ, ದಿನೇಶ್, ಉಮೇಶ್, ಯೋಗೇಂದ್ರ, ಪ್ರಭುಸ್ವಾಮಿ, ರಮೇಶ್, ಕಾರಾಪುರ ಕುಮಾರ್, ಶಿವಸ್ವಾಮಿ ಇದ್ದರು
Published on

ನಂಜನಗೂಡು: ತಾಲೂಕಿನ ಕಾರ್ಯ ಗ್ರಾಮ ಪಂಚಾಯಿತಿ ಸದಸ್ಯರಾಗಿ ಹುಚ್ಚಪ್ಪ ಅವಿರೋಧವಾಗಿ ಆಯ್ಕೆಯಾದರು.

ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದ ಸಿದ್ದಮಾದಪ್ಪ ಅವರ ಸ್ಥಾನಕ್ಕೆ ನ.23ರಂದು ಉಪ ಚುನಾವಣೆ ನಿಗದಿಯಾಗಿತ್ತು. ಹುಚ್ಚಪ್ಪ ಸೇರಿದಂತೆ ಮೂವರು ನಾಮಪತ್ರ ಸಲ್ಲಿಸಿದ್ದರು. ಆದರೆ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಭೀಮರಾವ್ ಅವಿರೋಧ ಆಯ್ಕೆ ಘೋಷಿಸಿದರು.

ಎಲ್ಲ ಪಕ್ಷದ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರ ಸಹಕಾರದಿಂದ ನಾನು ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಗ್ರಾಪಂ ಸದಸ್ಯನಾಗಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಹುಚ್ಚಪ್ಪ ಹೇಳಿದರು.

ಪಿಡಿಒ ಬಸವಣ್ಣ, ದಿನೇಶ್, ಉಮೇಶ್, ಯೋಗೇಂದ್ರ, ಪ್ರಭುಸ್ವಾಮಿ, ರಮೇಶ್, ಕಾರಾಪುರ ಕುಮಾರ್, ಶಿವಸ್ವಾಮಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net