

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ದೊಡ್ಡ ಅಂಕನಹಳ್ಳಿ ಗ್ರಾಮದಲ್ಲಿ ನ.7ರಿಂದ 10ರವರೆಗೆ ಹುಚ್ಚಮ್ಮ ದೇವಿ ದೇವಾಲಯದ ನೂತನ ಕಟ್ಟಡ ಲೋಕಾರ್ಪಣೆ ಮತ್ತು ಕುಂಭಾಭಿಷೇಕ ಹಾಗೂ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ.
ನ.7ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಅಮ್ಮನವರ ಸನ್ನಿಧಾನದಲ್ಲಿ ಶ್ರೀ ಮಹಾಗಣಪತಿ ಪೂಜೆ, ಶುದ್ಧಿಪುಣ್ಯಾಹ, ಪಂಚಗವ್ಯಸಾಧನೇ, ತೀರ್ಥಪ್ರೋಕ್ಷಣೆ ಮೂಲಕ ಯಾಗಾಶಾಲಾ ಪೂರ್ವಸಿದ್ಧತೆ ಮಾಡುವುದು.
ನ.8ರಂದು 8 ಬೆಳಗ್ಗೆ 7.50 ಕ್ಕೆ ಅನುಜ್ಞೆ, ಸುವಾಸಿನಿ, ಸವತ್ತಧೇನು ಸಮೇತ, ಅಕ್ರೋಧಕ ತೀರ್ಥಸಂಗ್ರಹ, ಪ್ರವೇಶಬಲಿ, ಯಾಗಾಶಾಲಾಪ್ರವೇಶ, ಶ್ರೀ ಮಹಾಗಣಪತಿ ಪೂಜೆ, ಶುಬ್ಧ ಪುಣ್ಯಾಹ, ಪಂಚಗವ್ಯ, ತೀರ್ಥಪ್ರೋಕ್ಷಣೆ, ಆಲಯಶುದ್ಧಿ, ದೇವನಾಂಬ, ಪ್ರತಿಮಾಸ್ವೀಕಾರ, ಮೃತ್ಸಂಗ್ರಹಣ, ಅಂಕುರಾರ್ಪಣೆ, ರಕ್ಷಾಬಂಧನ, ಗುತ್ತಿಗ್ಧರಣ, ಜಲಾಧಿವಾಸ, ವಾಸ್ತುರಾಷ್ಟ್ರೀಘ್ರಪೂಜೆ, ಕಳಸಾಭಿವಾಸ, ಪ್ರತಿಮಾಶೋಧನೆ, ದಶದಿಕ್ಷಾಲಕ ಕಳಸಾರಾಧನೆ, ಮೃತ್ಯಂಜಯಸಮೇತ, ನವಗ್ರಹರಾಧನೆ, ಧಾನ್ಯಾಧಿವಾಸ, ಸಿದ್ಧಿವಲ್ಲಭಸಮೇತ, ಗಣಪತಿಪೂಜೆ, ವಲ್ಲದೇವಸೇನಾಸಮೇತ, ಶ್ರೀ ಸುಬ್ರಮಣ್ಯಸ್ವಾಮಿ, ಕಲಶಾರಾಧನೆ, ಗಣಹೋಮ, ವಾಸ್ತುರಾಕ್ಷೆಘ್ನಹೋಮ, ಪರ್ಯಗ್ನಿಕರಣ, ಶೆಯ್ಯಭಿವಾಸ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ.
ನ. 9ರಂದು ಬೆಳಗ್ಗೆ 5 ರಿಂದ 6 ವರೆಗೆ ಸಲ್ಲುವ ಬ್ರಾಹ್ಮಿ ಮುಹೂರ್ತದಲ್ಲಿ ಪೀಠಪೂಜೆ, ಯಂತ್ರನ್ಯಾಸ, ರತ್ನನ್ಯಾಸ, ನೂತನ ಐಗ್ರಹ ಪ್ರತಿಷ್ಠೆ. ಅಷ್ಠಬಂಧ, ಮಂತ್ರನ್ಯಾಸ, ಪ್ರಾಣಪ್ರತಿಷ್ಠೆ, ಪ್ರಧಾನಹೋಮ, ಮಹಾಹವೀರ್ ನೈವೇದ್ಯ, ಮಹಾಪೂರ್ಣಾಹುತಿ, ಕಳಸೋದ್ವಾಸನ, ಯಾತ್ರಾದಾನೋತ್ಸವ, ದುರ್ಗಾಭಿಷೇಕ, ಕುಂಭಾಭಿಷೇಕ, ಅಲಂಕಾರ ಮಹಾನೈವೇದ್ಯ, ನೇತ್ರೋನ್ನಿಲನ, ನಿರೀಕ್ಷಣೆ, ಕುಶ್ಮಾಂಡ ಕದಳಿ ಛೇದನ, ಅಷ್ಟಾವಧಾನಸೇವೆ, ರಾಜೋಪಚಾರ, ಮಧ್ಯಾಹ್ನ 12 ರಿಂದ 12.25 ರೊಳಗೆ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ ಮತ್ತು ರಾತ್ರಿ 10 ಗಂಟೆಗೆ ಹೂ ಹೊಂಬಾಳಿ ಸಮೇತ ಶಿಂಷಾ ಹೊಳೆಯಿಂದ ಅಮ್ಮನನ್ನು ಕರೆತರಲಾಗುವುದು.
ನ.10 ರಂದು ಪಾತಃಕಾಲಪೂಜೆ ನಂತರ ಬೆಳಗ್ಗೆ 12ಕ್ಕೆ ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ಆದಿ ಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ತುಮಕೂರು ಸಿದ್ಧಗಂಗೆ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಶ್ರೀ ನಿಶ್ಚಲಾನಂದ ಸ್ವಾಮೀಜಿ, ಸ್ಪಟಿಕಪುರಿ ಮಹಾ ಸಂಸ್ಥಾನ ಶ್ರೀ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠದ ಪೀಠಾಧಿಪತಿ ಶ್ರೀ ನಂಜಾವಧೂತ ಸ್ವಾಮೀಜಿ, ಶ್ರೀ ಕದಂಬ ಜಂಗದ ಮಠದ ಧ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಗೌಡಗೆರೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಧರ್ಮಾಧಿಕಾರಿ ಶ್ರೀ ಮಲ್ಲೇಶ್, ಶ್ರೀ ಅಂಕನಾಥೇಶ್ವರಸ್ವಾಮಿ ದೇವಸ್ಥಾನದ ಅರ್ಚಕ ಪ್ರಕಾಶ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದ ಶ್ರೀ ಹುಚ್ಚಮ್ಮದೇವಿ ದೇಸ್ಥಾನ ಸೇವಾಟ್ರಸ್ಟ್ ಪದಾಧಿಕಾರಿಗಳು, ಯಜಮಾನರು, ಗ್ರಾಮಸ್ಥರು ತಿಳಿಸಿದ್ದಾರೆ.