VIDEO| ಹೀಯಾಳಿಸಿದ್ದಕ್ಕೆ ಹುಚ್ಚಾ ವೆಂಕಟ್​ರನ್ನು ಹಿಗ್ಗಾಮುಗ್ಗಾ ಥಳಿಸಿದ ಯುವಕರು

Venkat
Published on

ಮಂಡ್ಯ: ಮಂಡ್ಯದಲ್ಲಿ ನಟ ಹುಚ್ಚ ವೆಂಕಟ್​ ಪುಂಡಾಟ ಮುಂದುವರಿದಿದ್ದು, ಯುವಕರನ್ನು ಹೀಯಾಳಿಸಿದ್ದಕ್ಕೆ ಹುಚ್ಚಾ ವೆಂಕಟ್​ಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿಯ ಟೀ ಅಂಗಡಿ ಬಳಿ ನಿಂತಿದ್ದ ಹುಚ್ಚಾ ವೆಂಕಟ್​ರನ್ನು ಯುವಕರು ಮಾತನಾಡಿಸಲು ಬಂದಾಗ, ಯುವಕರನ್ನು ವೆಂಕಟ್​ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರಕ್ಕೊಳಗಾಗಿದ್ದ ಗರ್ಭಿಣಿ ಮಹಿಳೆಗೆ ಕರೊನಾ: ಪೊಲೀಸ್​, ವೈದ್ಯ, ಜಡ್ಜ್​ಗೂ ಕ್ವಾರಂಟೈನ್ ಸಂಕಷ್ಟ

ಹುಚ್ಚಾ ವೆಂಕಟ್​ನ ಕಿರಿಕಿರಿಗೆ ಬೇಸತ್ತ ಯುವಕರು ಕಾಲಿನಡಿ ಹಾಕಿ ತುಳಿದಿದ್ದಾರೆ. ಸ್ಥಳದಲ್ಲಿದ್ದವರು ಯುವಕರಿಂದ ಹುಚ್ಚಾ ವೆಂಕಟ್​ರನ್ನು ಬಿಡಿಸಿ ಸಮಾಧಾ‌ನ ಮಾಡಿದ್ದಾರೆ. ಬಳಿಕ ಹುಚ್ಚಾ ವೆಂಕಟ್​ ಬೆಂಗಳೂರು ಕಡೆಗೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net