ಹುಬ್ಬಳ್ಳಿಯ ಟೆಂಡರ್ ಶ್ಯೂರ್ ರಸ್ತೆ ಜಲಾವೃತ

tendar shure
ಹುಬ್ಬಳ್ಳಿಯ ಟೆಂಡರ್ ಶ್ಯೂರ್ ರಸ್ತೆ ಭಾನುವಾರ ರಾತ್ರಿ ಜಲಾವೃತವಾಗಿರುವುದು.
Published on

ಹುಬ್ಬಳ್ಳಿ: ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ತೋಳನಕೆರೆ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರು ಹೊರಗೆ ನುಗ್ಗಿದ ಪರಿಣಾಮ ಟೆಂಡರ್ ಶ್ಯೂರ್ ರಸ್ತೆ ಜಲಾವೃತವಾಗಿದೆ. ಸತತ ಮಳೆಯಿಂದ ಕೆರೆ ಭರ್ತಿಯಾಗಿದೆ. ಕೆರೆಯಲ್ಲಿ ಹೆಚ್ಚಾದ ನೀರು ನಾಲಾ ಮೂಲಕ ಹೊರಗೆ ನುಗ್ಗುತ್ತಿದೆ. ಭಾನುವಾರ ರಾತ್ರಿ ಏಕಾಏಕಿ ನೀರು ಹೊರಗೆ ಹರಿದಿದ್ದರಿಂದ ತೋಳನಕೆರೆಯಿಂದ ಸಿದ್ಧೇಶ್ವರ ಪಾರ್ಕ್ ವರೆಗಿನ ರಸ್ತೆ ಜಲಾವೃತಗೊಂಡಿದ್ದವು. ಇದರಿಂದ ವಾಹನ ಸವಾರರು, ಪಾದಚಾರಿಗಳು ಪರದಾಡಿದರು. ಸಮೀಪದ ನಿವಾಸಿಗಳು ಆಂತಕಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net