ಹುಬ್ಬಳ್ಳಿ ಅರ್ಬನ್​ ಬ್ಯಾಂಕ್​ ಸಂಸ್ಥಾಪನಾ ದಿನಾಚರಣೆ

IMG_20250131_203842_899.jpg
Published on

ಹುಬ್ಬಳ್ಳಿ: ಇಲ್ಲಿಯ ಹುಬ್ಬಳ್ಳಿ ಅರ್ಬನ್ ಕೋ ಆಪ್ ಬ್ಯಾಂಕಿನ 119ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಗ್ರಾಹಕರ ಸಮಾವೇಶವನ್ನು ಗುರುವಾರ ಬ್ಯಾಂಕ್ ಸಭಾಗೃಹದಲ್ಲಿ ಏರ್ಪಡಿಸಲಾಗಿತ್ತು.

ಸಾನ್ನಿಧ್ಯ ವಹಿಸಿದ್ದ ಶ್ರೀ ಕೃತಾತ್ಮಾನಂದ ಸ್ವಾಮೀಜಿ, ನಿಸ್ವಾರ್ಥ ಮನೋಭಾವನೆಯಿಂದ ಬ್ಯಾಂಕಿನ ಎಲ್ಲರೂ ಸೇವೆ ಸಲ್ಲಿಸಬೇಕು. ಬ್ಯಾಂಕ್ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಅತಿಥಿಯಾಗಿದ್ದ ಸಹಕಾರ ಸಂಘಗಳ ಉಪನಿಬಂಧಕ ರಮೇಶ ಬಗಲಿ ಮಾತನಾಡಿ, ನಿವ್ಹಳ ಬಡ್ಡಿ, ಲಾಭ ತರುವ ಯೋಜನೆಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಬ್ಯಾಂಕಿನ 14 ಹಿರಿಯ ಸದಸ್ಯರು, ಗ್ರಾಹಕರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಸಿಬ್ಬಂದಿಯ ಸೇವೆಯನ್ನು ಪ್ರಶಂಸಿಸಿದರು.
ಧಾರವಾಡದ ಸಪ್ತಾಪುರದಲ್ಲಿ ಶಾಖೆ ಆರಂಭಿಸಲು ಗ್ರಾಹಕರು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ವಿಕ್ರಮ ಸಿರೂರ ಮಾತನಾಡಿ, ಬ್ಯಾಂಕ್ ವ್ಯವಹಾರವು 520 ಕೋಟಿ ರೂ.ಗೂ ಹೆಚ್ಚಾಗಿದೆ. ಜನರ ವಿಶ್ವಾಸದಿಂದ ಪ್ರತಿ ವರ್ಷ ಅಭಿವೃದ್ಧಿ ಹೊಂದುತ್ತ ಸಾಗಿದೆ.
ಡಿಜಿಟಲ್ ಬ್ಯಾಂಕಿಂಗ್, ಇ ಕಾಮರ್ಸ್ ಸೇವೆಯನ್ನು ಗ್ರಾಹಕರು ಪಡೆದುಕೊಳ್ಳಬೇಕು. ಮುಂದಿನ ಐದು ವರ್ಷಗಳಲ್ಲಿ ವಹಿವಾಟು ದ್ವಿಗುಣಗೊಳಿಸುವ ಉದ್ದೇಶ ಇದೆ ಎಂದರು.

ನಿರ್ದೇಶಕರಾದ ಎಂ.ವಿ. ಸಾವಕಾರ, ಎ.ಆರ್. ಮನಗೂಳಿ, ಎಂ.ಬಿ. ಬುರಲಿ, ಪಿ.ಎಸ್. ಕಲಾಲ, ಆರ್.ಜಿ. ಬೆಂತುರ, ಸಿ.ಎಂ. ಕಮಡೊಳ್ಳಿ, ಬಿ.ಎಸ್. ತೇರದಾಳ, ಕೆ.ಆರ್. ಭಟ್, ವೀರೇಂದ್ರ ಕೌಜಲಗಿ, ಇತರರು ಪಾಲ್ಗೊಂಡಿದ್ದರು.

ತೃಪ್ತಿ ಪೈ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಜಿ.ಡಿ. ಉಪಾಧ್ಯಾಯ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಬಿ. ಮಠಪತಿ ಅತಿಥಿಗಳ ಪರಿಚಯ ಮಾಡಿದರು. ವ್ಯವಸ್ಥಾಪಕ ಸತೀಶ ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net