

ಹುಬ್ಬಳ್ಳಿ: ಭಾರತದ ಪವಿತ್ರ ಕ್ಷೇತ್ರಗಳಾದ ಶ್ರೀ ಅಮರನಾಥ ಹಾಗೂ ವೈಷ್ಣೋದೇವಿ ದರ್ಶನ ಪಡೆದ ಹುಬ್ಬಳ್ಳಿಯ 15 ಜನರ ತಂಡವು ಮಂಗಳವಾರ ನಗರಕ್ಕೆ ಮರಳಿದೆ.
ಜು. 15ರಂದು ಹುಬ್ಬಳ್ಳಿಯಿಂದ ಹೊರಟ ತಂಡವು ಕ್ಷೇತ್ರ ದರ್ಶನ ಪಡೆದು ಮಂಗಳವಾರ ಆಗಮಿಸಿದೆ. ಈ ತಂಡದಲ್ಲಿ ವಿನಾಯಕ ಪೂಜಾರಿ, ಶ್ರೀಧರ ಭಂಡಾರೆ, ಗೋಪಾಲ ಖೋಡೆ, ಪ್ರವೀಣ ಕಬಾಡೆ, ಪ್ರೀತಿ ಕಬಾಡೆ, ಗೋವಿಂದ ರತನ, ವಜ್ರೇಶ್ವರಿ ರತನ, ತುಳಜಪ್ಪ, ನಿರಂಜನ, ಧನಶ್ರೀ ನಿರಂಜನ, ಅಶೋಕ ಕಲಬುರ್ಗಿ, ರತ್ನಾಬಾಯಿ ಕಲಬುರ್ಗಿ, ಪರಶುರಾಮ ಹಬೀಬ, ಶಿಲ್ಪಾ ಹಬೀಬ, ಮೇಘರಾಜ ಚವ್ಹಾಣ, ರಾಜೇಶ್ವರಿ ಚವ್ಹಾಣ ಇದ್ದರು.
ಹಾದಿಯುದ್ದಕ್ಕೂ ಯಾತ್ರಾರ್ಥಿಗಳಿಗೆ ಅನೇಕ ಸೌಕರ್ಯ ಒದಗಿಸುವ ಜತೆಗೆ ಯಾತ್ರಾರ್ತಿಗಳ ರಕ್ಷಣೆಗೆ ನಮ್ಮ ಭಾರತೀಯ ಸೈನ್ಯ ಬೆಂಗಾವಲಾಗಿತ್ತು. ಕೇಂದ್ರ ಸರ್ಕಾರವು ಯಾತ್ರೆಯ ಹಾದಿಯನ್ನು ಸುಗಮಗೊಳಿಸಿದೆ. ಅನೇಕ ಸಂಘ-ಸಂಸ್ಥೆಗಳ ಸಮಾಜದ ವಿವಿಧ ಜನರ ತಂಡಗಳು ಪ್ರತಿ ಹಾದಿಯುದ್ದಕ್ಕೂ ಭೋಜನ ಹಾಗೂ ವಸತಿ ವ್ಯವಸ್ಥೆ ಮಾಡಿದ್ದವು ಎಂದು ತಂಡದ ಸದಸ್ಯ ಶ್ರೀಧರ ಭಂಡಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.