ಹುಬ್ಬಳ್ಳಿ ತಾಲೂಕು ಮಟ್ಟದ ಅಥ್ಲೆಟಿಕ್ಸ್,  ಐಬಿಎಂಆರ್ ಪಿಯು ಕಾಲೇಜಿನಿಂದ ಆಯೋಜನೆ

IMG-20250924-WA0018.jpg
Published on

ಹುಬ್ಬಳ್ಳಿ: ಇಲ್ಲಿಯ ಐಬಿಎಂಆರ್ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಕರ್ನಾಟಕ ಶಾಲಾ ಶಿಕ್ಷಣ ಪದವಿಪೂರ್ವ ವಿಭಾಗದ ಸಹಯೋಗದೊಂದಿಗೆ ನಗರ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಮಂಗಳವಾರ ಯಶಸ್ವಿಯಾಗಿ ಏರ್ಪಡಿಸಲಾಯಿತು.

ವಿವಿಧ ಕಾಲೇಜುಗಳಿಂದ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಟ್ರ್ಯಾಕ್ ಮತ್ತು ಫೀಲ್ಡ್ ಇವೆಂಟ್ ಗಳಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದರು. ಓಟ, ಶಾಟ್ ಪುಟ್, ಡಿಸ್ಕಸ್ ಥ್ರೋ, ಲಾಂಗ್ ಜಂಪ್ ಮುಂತಾದ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳ ಉತ್ಸಾಹ ಕಂಡು ಬಂತು.

ಬಾಲಕರ ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲಿ ಪಿ.ಸಿ. ಜಾಬಿನ್ ಕಾಲೇಜಿನ ವಿದ್ಯಾರ್ಥಿಗಳು ಜನರಲ್ ಚಾಂಪಿಯನ್ ಗಳಾಗಿ ಹೊರಹೊಮ್ಮಿದರು.

ಡಿಡಿಪಿಯು ಡಾ. ತೇಜಸ್ವಿನಿ ನಾರಾಯಣಕರ್, ಸಂದೀಪ ಬೂದಿಹಾಳ, ಧಾರವಾಡ ಜಿಲ್ಲಾ ಕ್ರೀಡಾ ಸಂಚಾಲಕ ಐ.ಆರ್. ಹುಬ್ಬಳ್ಳಿ, ಐಬಿಎಂಆರ್ ಕ್ಯಾಂಪಸ್ ನಿರ್ದೇಶಕ ಎಂ.ಎಸ್. ಬಿರಾದಾರ ಇತರರು ಕ್ರೀಡಾಕೂಟ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.

ಐಬಿಎಂಆರ್ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ್, ಐಬಿಎಂಆರ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ನಜೀಮ್ ಹುಸೇನ್ ಮಿಶ್ರಿಕೋಟಿ ಮಾತನಾಡಿ, ಪ್ರಶಂಸೆ ವ್ಯಕ್ತಪಡಿಸಿದರು.

ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಣ್ಣಪ್ಪ ಕೊರವರ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ ಶೆಟ್ಟರ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net