75 ನಿಮಿಷ ರಾಷ್ಟ್ರಧ್ವಜದೊಂದಿಗೆ ಸ್ಕೇಟಿಂಗ್​ ರ್ಯಾಲಿ

H14 Skating Rally
Published on

ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಉದ್ಯಾನವನದ ಸ್ಕೇಟಿಂಗ್​ ಮೈದಾನದಲ್ಲಿ ಭಾನುವಾರ ಧಾರವಾಡ ಜಿಲ್ಲಾ ರೂಲರ್​ ಸ್ಕೇಟಿಂಗ್​ ಅಸೋಸಿಯೇಶನ್​ ವತಿಯಿಂದ ಸ್ಕೇಟಿಂಗ್​ ತಿರಂಗಾ ರ್ಯಾಲಿ ಆಯೋಜಿಸಲಾಗಿತ್ತು. 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 75 ಸ್ಕೇಟಿಂಗ್​ ಪಟುಗಳು ನಿರಂತರವಾಗಿ 75 ನಿಮಿಷಗಳ ಕಾಲ ರಾಷ್ಟ್ರಧ್ವಜ ಹಿಡಿದು ಸ್ಕೇಟಿಂಗ್​ ರ್ಯಾಲಿ ಮಾಡುವ ಮೂಲಕ ಗೌರವ ಸಲ್ಲಿಸಿದರು. ಅಸೋಸಿಯೇಶನ್​ ಅಧ್ಯಕ್ಷ ಈರಣ್ಣ ಕಾಡಪ್ಪನವರ, ಕಾರ್ಯದಶಿರ್ ಮಲ್ಲಿಕಾರ್ಜುನ ಕಾಡಪ್ಪನವರ, ತರಬೇತುದಾರ ಅಕ್ಷಯ ಸೂರ್ಯವಂಶಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net