

ರಾಣೆಬೆನ್ನೂರ: ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದ ಧರ್ಮದಶಿರ್ ತಾಲೂಕಿನ ಹಿರೇಬಿದರಿ ಗ್ರಾಮದ ಸಿದ್ಧನಗೌಡ ಪಾಟೀಲ ಎಂಬುವರು ಭಕ್ತರಿಂದ ದೇಣಿಗೆ ರೂಪದಲ್ಲಿ ಹಣ ಪಡೆದುಕೊಂಡು ರಸೀದಿ ನೀಡದೆ ಮೋಸ ಮಾಡಿದ್ದು ಈವರೆಗೆ ಯಾರೂ ಮಠದ ಹಣ ಹಾಗೂ ದೇಣಿಗೆ, ದವಸ, ಧಾನ್ಯ ನೀಡಬಾರದು ಎಂದು ಮಠದ ಭಕ್ತ ಅರುಣಕುಮಾರ ಯಲ್ಲಕ್ಕನವರ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠಕ್ಕೆ ರಾಣೆಬೆನ್ನೂರಿನಿಂದ ದವಸ, ಧಾನ್ಯಗಳನ್ನು ಬಹಳಷ್ಟು ಲಾರಿಗಳ ಮೂಲಕ ಕಳುಹಿಸಲಾಗುತ್ತಿತ್ತು. ದೇಣಿಗೆ ಹಣವನ್ನು ನೇರವಾಗಿ ಮಠಕ್ಕೆ ನೀಡಿ ರಸೀದಿ ಪಡೆದು ಭಕ್ತರಿಗೆ ಕೊಡಲಾಗುತ್ತಿತ್ತು.
ರಾಣೆಬೆನ್ನೂರಿನಿಂದ ಹೆಚ್ಚಿನ ಪ್ರಮಾಣದಲ್ಲಿ ದವಸ, ಧಾನ್ಯ ಹಾಗೂ ದೇಣಿಗೆ ಸಂಗ್ರಹದ ಹಿನ್ನಲೆಯಲ್ಲಿ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠ ಕಮಿಟಿಯಲ್ಲಿ ರಾಣೆಬೆನ್ನೂರಿನವರು ಒಬ್ಬರು ಇರಬೇಕು ಎಂದು ಮಠದವರು ಸಿದ್ದನಗೌಡ ಪಾಟೀಲ ಅವರನ್ನು ಧರ್ಮದಶಿರ್ಯನ್ನಾಗಿ ಆಯ್ಕೆ ಮಾಡಿದ್ದರು.
ಆದರೆ, ಈತ ಆಯ್ಕೆಯಾದ ದಿನದಿಂದಲೂ ತಾಲೂಕಿನಲ್ಲಿ ಮಠದ ಹೆಸರಿನಲ್ಲಿ ಬಹಳಷ್ಟು ದೇಣಿಗೆ ಪಡೆದುಕೊಂಡಿದ್ದಾನೆ. ಆದರೆ, ಅವರಿಗೆ ಯಾರಿಗೂ ರಸೀದಿ ನೀಡಿಲ್ಲ. ಅಲ್ಲದೆ ಮಠದ ಕ್ಯೂಆರ್ ಸ್ಕಾ$ನರ್ ಇದ್ದರೂ ತನ್ನ ಸ್ವಂತ ಸ್ಕಾ$ನರ್ ನೀಡಿ ಹಣ ಹಾಕಿಸಿಕೊಂಡಿದ್ದಾನೆ. ಈ ಬಗ್ಗೆ ರಸೀದಿ ನೀಡುವಂತೆ ಕೇಳಿದರೂ ಈವರೆಗೂ ನೀಡಿಲ್ಲ.
ಕಳೆದ ಶಿವರಾತ್ರಿ ಸಮಯದಲ್ಲಿ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವೇದಾಂತ್ ಪರಿಷತ್ ಸಮಾರಂಭ ನಿಮಿತ್ತ ೆ. 8ರಂದು ಜ್ಯೋತಿ ರಥಯಾತ್ರೆ ಬಂದಿತ್ತು. ಆಗ ಸಿದ್ದನಗೌಡ ಪಾಟೀಲಗೆ ಎಲ್ಲ ಭಕ್ತರು ಹಣ ಸಂಗ್ರಹಿಸಿ ಕೊಟ್ಟಿದ್ದಾರೆ. ಆ ಎಲ್ಲ ಹಣಕ್ಕೂ ರಸೀದಿ ನೀಡಬೇಕಾದ ಆತ ಇಂದು ನಾಳೆ ಎಂದು ದಿನ ದೂಡುತ್ತ ಬಂದಿದ್ದಾರೆ.
ಆದ್ದರಿಂದ ಆತನ ವಿರುದ್ಧ ರಾಣೆಬೆನ್ನೂರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಈ ಬಗ್ಗೆ ಮಠದ ಆಡಳಿತಾಧಿಕಾರಿಯಾಗಿರುವ ಧಾರವಾಡ ಜಿಲ್ಲಾ ನ್ಯಾಯಾಧೀಶರು ದೂರು ನೀಡಲಾಗುವುದು. ಆತನ ಧರ್ಮದಶಿರ್ ಸದಸ್ಯತ್ವ ರದ್ದುಪಡಿಸಲು ಕೋರಲಾಗುವುದು.
ರಾಣೆಬೆನ್ನೂರ ಭಾಗದ ಭಕ್ತರು ಮುಂದಿನ ದಿನದಲ್ಲಿ ಹುಬ್ಬಳ್ಳಿ ಮಠಕ್ಕೆ ದೇಣಿಗೆ ನೀಡುವವರಿದ್ದರೆ ನೇರವಾಗಿ ಮಠದ ಸ್ಕಾ$ನರ್ಗೆ ಹಾಕಬೇಕು. ಇಲ್ಲವೆ ಮಠಕ್ಕೆ ತೆರಳಿ ದೇಣಿಗೆ ನೀಡಿ ರಸೀದಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಠದ ಭಕ್ತರಾದ ರಾಯಣ್ಣ ಮಾಕನೂರ, ಹನುಮಂತಪ್ಪ ಕಬ್ಬಾರ, ಪ್ರಕಾಶ ಪಾಟೀಲ, ಗುಡ್ಡಪ್ಪ ದೇವರಗುಡ್ಡ, ಸದಾಶಿವಪ್ಪ ಯರೇಸೀಮಿ, ಉಮೇಶ ಮುಷ್ಟೂರುನಾಯ್ಕ, ಶಾಂತಪ್ಪ ಕೋಣನತಲಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.