ಚನ್ನಮ್ಮ ಮೈದಾನದ ಗಣೇಶನ ದರ್ಶನ ಪಡೆದ ಭಕ್ತರು

h1-Edga RSS 2
Published on

ಹುಬ್ಬಳ್ಳಿ: ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳದ ವತಿಯಿಂದ ಚನ್ನಮ್ಮ ಮೈದಾನದಲ್ಲಿ ಮೊದಲ ಬಾರಿಗೆ ಪ್ರತಿಷ್ಠಾಪಿಸಿರುವ ಗಣೇಶನ ದರ್ಶನ ಪಡೆದ ಸಹಸ್ರಾರು ಭಕ್ತರು ಪುನೀತರಾದರು. ಈ ಗಣೇಶ ಈ ಬಾರಿ ವಾಣಿಜ್ಯ ನಗರಿಯ ಕೇಂದ್ರ ಬಿಂದುವಾಗಿತ್ತು.
ಗುರುವಾರ ಬೆಳಗ್ಗೆಯಿಂದಲೇ ಹಲವು ಗಣ್ಯರು ಸೇರಿದಂತೆ ಸಾರ್ವಜನಿಕರು ಚನ್ನಮ್ಮ ಮೈದಾನದತ್ತ ಆಗಮಿಸುತ್ತಿದ್ದರು. ಗಣೇಶ ಮಂಟಪದ ಸುತ್ತ ಬ್ಯಾರಿಕೇಡ್​ ಅಳವಡಿಸಲಾಗಿತ್ತು. ಸಾಲಾಗಿ ಬಂದು ಗಣೇಶನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಂಜೆ ವೇಳೆ ಜನಜಂಗುಳಿ ಹೆಚ್ಚಾಗಿತ್ತು. ಕೆಲ ಭಕ್ತರು ಪ್ರಸಾದ ವಿತರಿಸಿದರು. ಮೈದಾನದ ಸುತ್ತ ಪೊಲೀಸ್​ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಆರ್​ಎಸ್​ಎಸ್​ ಪ್ರಾರ್ಥನೆ
ರಾಷ್ಟ್ರೀಯ ಸ್ವಯಂ ಸೇವಕ ಸಂ (ಆರ್​ಎಸ್​ಎಸ್​)ದ ಗಣವೇಷಧಾರಿ ಸ್ವಯಂಸೇವಕರು ಘೋಷ ವಾದ್ಯದೊಂದಿಗೆ ಚನ್ನಮ್ಮ ಮೈದಾನಕ್ಕೆ ಆಗಮಿಸುವ ಮೂಲಕ ಗಣೇಶನಿಗೆ ವಿಭಿನ್ನವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು ಎಲ್ಲರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net