ಹುಬ್ಬಳ್ಳಿಯಲ್ಲಿ ಸತತ ಮಳೆಗೆ ಕುಸಿದ ಮನೆಗಳು

IMG-20230725-WA0017.jpg
Published on

ಹುಬ್ಬಳ್ಳಿ: ನಗರ ಹಾಗೂ ತಾಲೂಕಿನಲ್ಲಿ ಮಂಗಳವಾರವೂ ಮಳೆ ಮುಂದುವರಿದಿದ್ದು, ಹಲವು ಕಡೆಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.
ತಾಲೂಕಿನಲ್ಲಿ 10 ಮನೆಗಳ ಗೋಡೆ ಕುಸಿದಿದ್ದು, ಸುಮಾರು ನಾಲ್ಕು ಲಕ್ಷ ರೂಪಾಯಿ ಆಸ್ತಿಪಾಸ್ತಿ ನಷ್ಟವಾಗಿದೆ.

ತಾಲೂಕಿನ ಅಗಡಿಯಲ್ಲಿ 3, ಬುಡರಸಿಂಗಿ 1, ಅದರಗುಂಚಿ 2 ಹಾಗೂ ಪಾಳೆಯಲ್ಲಿ 4 ಮನೆಗಳು ಕುಸಿದಿವೆ ಎಂದು ತಹಸೀಲ್ದಾರ್ ಪ್ರಕಾಶ ನಾಶಿ ತಿಳಿಸಿದ್ದಾರೆ.

ತಾಲೂಕಿನ ಚವರಗುಡ್ಡ ಗ್ರಾಮದ ಬಿಬೀಜಾನ್ ಅಲ್ಲಿಸಾಬ ಶೇಖಸನದಿ ಅವರ ಮನೆಯ ಗೋಡೆ ಸೋಮವಾರ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net