ರೈಲು ನಿಲ್ದಾಣದ ಬಳಿ ಪೆಡ್ಲರ್​ ಬಂಧನ; 12 ಕೆ.ಜಿ. ಗಾಂಜಾ ಪೊಲೀಸ್​ ವಶಕ್ಕೆ

Ganjaa
Published on

ಹುಬ್ಬಳ್ಳಿ: ಬ್ಯಾಗ್​ನಲ್ಲಿ ಗಾಂಜಾ ಇಟ್ಟುಕೊಂಡು ನಗರದಲ್ಲಿ ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಸೈಬರ್​ ಕೆಂ ಮತ್ತು ವಾಣಿಜ್ಯ ಹಾಗೂ ಮಾದಕ ದ್ರವ್ಯಗಳ ಅಪರಾಧ (ಸಿಇಎನ್​) ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಪಿತನಿಂದ ಬರೋಬ್ಬರಿ 12 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ಸ್ಟೇಶನ್​ ರಸ್ತೆಯ ರೈಲು ನಿಲ್ದಾಣದ ಬಳಿ ಆರೋಪಿತನು ಬ್ಯಾಗ್​ನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಡಿಸಿಪಿ ಸಾಹಿಲ್​ ಬಾಗ್ಲಾ ಮಾರ್ಗದರ್ಶನದಲ್ಲಿ ಸಿಇಎನ್​ ಠಾಣೆ ಇನ್​ಸ್ಪೆಕ್ಟರ್​ ಎಂ.ಎಸ್​.ಹೂಗಾರ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ಗಾಂಜಾ ಪೆಡ್ಲರ್​ ಆಂಧ್ರ ಪ್ರದೇಶದಿಂದ ರೈಲಿನ ಮೂಲಕ ಗಾಂಜಾ ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ. ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net