ಕೆರೆಯಲ್ಲಿ ಮುಳುಗಿ ಮೂರ್ಛೆ ರೋಗಿ ಸಾವು

Death ion Pond
Published on

ಹುಬ್ಬಳ್ಳಿ: ಕೆರೆಯ ಬಳಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಮೂರ್ಛೆ ರೋಗ ಕಾಣಿಸಿಕೊಂಡು ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟ ಟನೆ ತಾಲೂಕಿನ ಭಂಡಿವಾಡ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.
ಗ್ರಾಮದ ಮಾರುತಿ ಮಹದೇವಪ್ಪ ಯಡವಣ್ಣವರ (58) ಮೃತಪಟ್ಟವರು. ಮಾರುತಿಗೆ ಮೂರ್ಛೆ ರೋಗವಿತ್ತು. ಶುಕ್ರವಾರ ತಮ್ಮ ಜಮೀನಿನ ಬಳಿ ಇರುವ ದೇಸಾಯಿ ಅವರ ಕೆರೆಯ ಬಳಿ ನಿಂತಿದ್ದರು. ಈ ವೇಳೆ ಏಕಾಏಕಿ ಮೂರ್ಛೆ ರೋಗ ಕಾಣಿಸಿಕೊಂಡಿದೆ. ಪರಿಣಾಮ ಕೆರೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net