ನಾಲಾ ಸ್ಲಾಬ್​ ಕುಸಿದು ಸಿಲುಕಿದ ಲಾರಿ

H6 Truck Struck
Published on

ಹುಬ್ಬಳ್ಳಿ: 16 ಚಕ್ರಗಳ ಲಾರಿಯೊಂದು ಸಂಚರಿಸುವ ವೇಳೆ ನಾಲಾ ಮೇಲಿನ ಕಾಂಕ್ರೀಟ್​ ಸ್ಲಾಬ್​ ಕುಸಿದ ಟನೆ ಕಮರಿಪೇಟೆಯಲ್ಲಿ ಶುಕ್ರವಾರ ಸಂಭವಿಸಿದೆ.
ಕಮರಿಪೇಟ ಪೊಲೀಸ್​ ಠಾಣೆ ಹಿಂಭಾಗದಲ್ಲಿರುವ ತುಮಕೂರ ಗಲ್ಲಿಗೆ ಹೋಗುವ ರಸ್ತೆಯಲ್ಲಿ ಹಲವು ವರ್ಷಗಳ ಹಿಂದೆ ನಾಲಾ ಮೇಲೆ ಕಾಂಕ್ರೀಟ್​ ಸ್ಲಾಬ್​ ಹಾಕಲಾಗಿದೆ. ಲು ಮತ್ತು ಮಧ್ಯಮ ಭಾರದ ವಾಹನಗಳ ಸಂಚರಾಕ್ಕೆ ತೊಂದರೆ ಇರಲಿಲ್ಲ. ರಾಜಸ್ಥಾನದಿಂದ ಹುಬ್ಬಳ್ಳಿಗೆ ್ಲೆ$ವುಡ್​ ತುಂಬಿಕೊಂಡು ಬಂದಿದ್ದ ಅಧಿಕ ಭಾರದ ಲಾರಿ ಹಾದು ಹೋಗುವಾರ ನಾಲಾ ಸ್ಲಾಬ್​ ಕುಸಿದಿದೆ. ಇದರಿಂದ ಕೆಲ ಕಾಲ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಸತತವಾಗಿ ಸುರಿಯುತ್ತಿರುವ ಮಳೆಯಿಂದ ತುಂಬಿ ಹೋಗಿದ್ದ ನಾಲಾವನ್ನು ಸ್ವಚ್ಛಗೊಳಿಸುವ ಸಲುವಾಗಿ ಇತ್ತೀಚೆಗೆ ಅರ್ಧ ಭಾಗವನ್ನು ತೆರವುಗೊಳಿಸಿದ್ದರಿಂದ ಉಳಿದ ಭಾಗ ಶಿಥಿಲಗೊಂಡಿತ್ತು ಎನ್ನಲಾಗಿದೆ.
ಸ್ಥಳಕ್ಕೆ ದಣ ಸಂಚಾರ ಠಾಣೆ ಪೊಲೀಸರು ಆಗಮಿಸಿ ಪರಿಶೀಲಿಸಿದರು. ಲಾರಿ ತೆರವುಗೊಳಿಸಿ ಮುಂದಿನ ಕ್ರಮ ಜರುಗಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net